ಕತಾರ್ ಓಪನ್: ಮತ್ತೆ ಜೊಕೊ, ಮರ್ರೆ ಮುಖಾಮುಖಿ?

Published : Jan 06, 2017, 01:02 PM ISTUpdated : Apr 11, 2018, 12:40 PM IST
ಕತಾರ್ ಓಪನ್: ಮತ್ತೆ ಜೊಕೊ, ಮರ್ರೆ ಮುಖಾಮುಖಿ?

ಸಾರಾಂಶ

ಸದ್ಯದ ಮಟ್ಟಿಗೆ ವಿಶ್ವದ ಮುಂಚೂಣಿ ಆಟಗಾರರಾದ ಮರ್ರೆ ಹಾಗೂ ಜೊಕೊವಿಚ್ ಶನಿವಾರ ನಡೆಯಲಿರುವ ಫೈನಲ್‌'ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ.

ದೋಹಾ(ಜ.06): ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ಆ್ಯಂಡಿ ಮರ್ರೆ ಹಾಗೂ ಎರಡನೇ ಶ್ರೇಯಾಂಕಿತ ಪಟು ನೊವಾಕ್ ಜೊಕೊವಿಚ್ ಕತಾರ್ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್‌ಗೆ ಧಾವಿಸಿದ್ದಾರೆ.

ಗುರುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌'ಫೈನಲ್ ಹಣಾಹಣಿಯಲ್ಲಿ ಬ್ರಿಟನ್ ಆಟಗಾರ ಮರ್ರೆ ಸ್ಪೇನ್‌'ನ ನಿಕೊಲಾಸ್ ಆಲ್ಮಾಗ್ರೊ ವಿರುದ್ಧ ಕಠಿಣ ಹೋರಾಟ ನಡೆಸಿ 7-6 (7/4), 7-5 ಸೆಟ್‌'ಗಳ ಗೆಲುವು ಪಡೆದು ಆ ಮೂಲಕ ಸತತ 27ನೇ ಜಯದ ದಾಖಲೆ ಬರೆದರು.

ಇನ್ನು ಮತ್ತೊಂದು ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಚ್, ಸ್ಪೇನ್‌'ನ ಹಿರಿಯ ಆಟಗಾರ ರಾಡಿಕ್ ಸ್ಟೆಪಾನೆಕ್ ಅವರನ್ನು 6-3, 6-3 ನೇರ ಹಾಗೂ ಸುಲಭ ಸೆಟ್‌'ಗಳಲ್ಲಿ ಮಣಿಸಿದರು.

ಸದ್ಯದ ಮಟ್ಟಿಗೆ ವಿಶ್ವದ ಮುಂಚೂಣಿ ಆಟಗಾರರಾದ ಮರ್ರೆ ಹಾಗೂ ಜೊಕೊವಿಚ್ ಶನಿವಾರ ನಡೆಯಲಿರುವ ಫೈನಲ್‌'ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ. ಅಂದಹಾಗೆ ಇಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಮರ್ರೆ, ಥಾಮಸ್ ಬೆರ್ಡಿಚ್ ವಿರುದ್ಧ ಸೆಣಸಲಿದ್ದರೆ, ಜೊಕೊವಿಚ್ ಸ್ಪೇನ್‌ನ ಫೆರ್ನಾಂಡೊ ವರ್ಡೆಸ್ಕೋ ವಿರುದ್ಧ ಕಾದಾಡಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ತಂಡದಲ್ಲಿ ಸಂಚಲನ: ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು?
ಕೊಹ್ಲಿ-ರೋಹಿತ್ ಮುಂದಿನ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಆಡೋದು ಯಾವಾಗ? ಲೈವ್ ಸ್ಟ್ರೀಮ್ ಇರುತ್ತಾ?