ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಜೊತೆ ಕ್ರಿಕೆಟ್ ಮಾತ್ರವಲ್ಲ, ಯಾವುದೇ ಕ್ರೀಡೆ ಆಡುವುದು ಬೇಡ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಪುಲ್ವಾಮಾ ದಾಳಿಯಿಂದ ಆಕ್ರೋಶಗೊಂಡಿರುವ ಭಾರತೀಯರ ನಡೆ ಕುರಿತು ಗಂಗೂಲಿ ಹೇಳಿದ್ದೇನು? ಇಲ್ಲಿದೆ ವಿವರ.
ಕೋಲ್ಕತಾ(ಫೆ.21): ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಹೈರಾಣಾಗಿ ಹೋಗಿದೆ. ಪಾಕ್ ಪ್ರಚೋದಿತ ಭಯೋತ್ಪಾದನೆ ನಿಲ್ಲಿಸುವವರೆಗೂ ಪಾಕಿಸ್ತಾನ ಜೊತೆ ಯಾವುದೇ ವ್ಯವಹಾರಕ್ಕೆ ಭಾರತ ಮುಂದಾಗುತ್ತಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಪಾಕಿಸ್ತಾನ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: ಮೋದಿ ನಿರ್ಧಾರದ ಮೇಲೆ ನಿಂತಿದೆ ಟೀಂ ಇಂಡಿಯಾ ವಿಶ್ವಕಪ್ ಭವಿಷ್ಯ..!
undefined
ಪಾಕಿಸ್ತಾನ ಜೊತೆಗಿನ ಕ್ರಿಕೆಟ್ ಮಾತ್ರವಲ್ಲ, ಯಾವುದೇ ಕ್ರೀಡೆ ಬೇಡ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಪಾಕಿಸ್ತಾನ ಜೊತೆಗಿನ ಯಾವುದೇ ದ್ವಿಪಕ್ಷೀಯ ಸರಣಿ, ಕ್ರೀಡೆಗಳು ಸೂಕ್ತವಲ್ಲ. ಪುಲ್ವಾಮ ದಾಳಿ ಬಳಿಕ ಭಾರತೀಯ ಆಕ್ರೋಶ ಸರಿಯಾಗಿದೆ ಎಂದು ಗಂಗೂಲಿ ಹೇಳಿದ್ದಾರೆ. ಕ್ರಿಕೆಟಿಗರು ಪ್ರತಿನಿಧಿಸುತ್ತಿರುವುದು ದೇಶವನ್ನು ಹೀಗಾಗಿ ದೇಶ ಮೊದಲು ಎಂದಿದ್ದಾರೆ.
ಇದನ್ನೂ ಓದಿ: ಆಸಿಸ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ- ಸ್ಟಾರ್ ಆಟಗಾರ ಔಟ್!
ಪಾಕ್ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆ ಈ ದಾಳಿ ನಡೆಸಿದೆ. ಇಷ್ಟಾದರೂ ಈ ಸಂಘಟನೆಯ ಸಂಸ್ಥಾಪಕ ಪಾಕಿಸ್ತಾನದಲ್ಲಿ ಯಾವುದೇ ಆತಂಕವಿಲ್ಲದೆ ಒಡಾಡುತ್ತಿದ್ದಾನೆ. ಇಷ್ಟಾದರೂ ಪಾಕಿಸ್ತಾನ ಭಯೋತ್ಪಾದನೆಯನ್ನ ನಿಯಂತ್ರಿಸುತ್ತಿಲ್ಲ ಅನ್ನೋ ಆಕ್ರೋಶ ಇಡೀ ಭಾರತದಲ್ಲಿ ವ್ಯಕ್ತವಾಗುತ್ತಿದೆ.