ಮಳೆ ಎಫೆಕ್ಟ್: ಮುಂದಿನ ವರ್ಷ ಕೊಡವ ಹಾಕಿ ಇಲ್ಲ

By Web DeskFirst Published Sep 5, 2018, 11:32 AM IST
Highlights

 ಈ ಬಾರಿ ನಾಪೋಕ್ಲುವಿನಲ್ಲಿ ನಡೆದ ಕುಲ್ಲೇಟಿರ ಕಪ್‌ನ ಕೊನೆಯಲ್ಲಿ 2019 ರಲ್ಲಿ 23ನೇ ವರ್ಷದ ಹಾಕಿ ಉತ್ಸವ ಆಯೋಜಿಸಲು ಮುಕ್ಕಾಟಿರ ಕುಟುಂಬಕ್ಕೆ ಧ್ವಜ ಹಸ್ತಾಂತರ ಮಾಡಲಾಗಿತ್ತು. ಹಾಕಿ ಉತ್ಸವಕ್ಕಾಗಿ ಮುಕ್ಕಾಟಿರ ಕುಟುಂಬ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿತ್ತು. ₹13 ಲಕ್ಷ ವಿನಿಯೋಗಿಸಿ ಮೈದಾನವನ್ನು ಸಜ್ಜುಗೊಳಿಸಿತ್ತು. ಆದರೆ, ಇದೀಗ ಕೂಟ 2020ಕ್ಕೆ ಮುಂದೂಡಲ್ಪಟ್ಟಿದೆ. 

ಕೊಡಗು[ಸೆ.05]: ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದ ಪ್ರಭಾವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಮೇಲೂ ಪರಿಣಾಮ ಬೀರಿದ್ದು, ಒಂದು ವರ್ಷ ಮುಂದೂಡಲ್ಪಟ್ಟಿದೆ. 2019ರಲ್ಲಿ ವಿರಾಜಪೇಟೆ ತಾಲೂಕಿನ ಬಾಳುಗೋಡುವಿನಲ್ಲಿ ಮುಕ್ಕಾಟಿರ (ಹರಿಹರ) ಕುಟುಂಬದಿಂದ ಹಾಕಿ ನಡೆಸಬೇಕಿದ್ದ, ಹಾಕಿ ಉತ್ಸವವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವ ನಿರ್ಧಾರವನ್ನು ಕೊಡವ ಹಾಕಿ ಅಕಾಡೆಮಿ ಕೈಗೊಂಡಿದೆ.

ಅಕಾಡೆಮಿ ಪ್ರಮುಖರ ಸಭೆ: ವಿರಾಜಪೇಟೆಯ ಕ್ಲಬ್‌ವೊಂದರಲ್ಲಿ ಅಕಾಡೆಮಿ ಕಾರ್ಯಾಧ್ಯಕ್ಷ ರಮೇಶ್ ಕಾರ್ಯಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಮುಂದಿನ ವರ್ಷ ಹಾಕಿ
ಉತ್ಸವ ನಡೆಸದಿರುವ ನಿರ್ಣಯ ಕೈಗೊಳ್ಳಲಾಯಿತು. ಭಾರೀ ಮಳೆಯಿಂದ ಮಡಿಕೇರಿ ತಾಲೂಕಿನ ಮಾದಾಪುರ, ಮುಕ್ಕೊಡ್ಲು, ಹಮ್ಮಿಯಾಲ, ಮಕ್ಕಂದೂರು, ಸೂರ್ಲಬ್ಬಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಅಪಾರ ಸಾವು-ನೋವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಾಕಿ ಉತ್ಸವವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಲು ಎಲ್ಲರು ನಿರ್ಧರಿಸಿದರು.

₹13 ಲಕ್ಷ ವೆಚ್ಚ: ಈ ಬಾರಿ ನಾಪೋಕ್ಲುವಿನಲ್ಲಿ ನಡೆದ ಕುಲ್ಲೇಟಿರ ಕಪ್‌ನ ಕೊನೆಯಲ್ಲಿ 2019 ರಲ್ಲಿ 23ನೇ ವರ್ಷದ ಹಾಕಿ ಉತ್ಸವ ಆಯೋಜಿಸಲು ಮುಕ್ಕಾಟಿರ ಕುಟುಂಬಕ್ಕೆ ಧ್ವಜ ಹಸ್ತಾಂತರ ಮಾಡ
ಲಾಗಿತ್ತು. ಹಾಕಿ ಉತ್ಸವಕ್ಕಾಗಿ ಮುಕ್ಕಾಟಿರ ಕುಟುಂಬ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿತ್ತು. ₹13 ಲಕ್ಷ ವಿನಿಯೋಗಿಸಿ ಮೈದಾನವನ್ನು ಸಜ್ಜುಗೊಳಿಸಿತ್ತು. ಆದರೆ, ಇದೀಗ ಕೂಟ 2020ಕ್ಕೆ ಮುಂದೂಡಲ್ಪಟ್ಟಿದೆ. 
 

click me!