
ಚೆನ್ನೈ(ಮಾ.22): ತ್ರಿಕೋನ ಟಿ20 ಸರಣಿ ಫೈನಲ್ ಮುಕ್ತಾಯಗೊಂಡು 4 ದಿನಗಳು ಕಳೆದರೂ, ತಂಡವನ್ನು ಸೋಲಿನ ಸುಳಿಗೆ ತಳ್ಳಿದ್ದ ಸನ್ನಿವೇಶವನ್ನೂ ಇನ್ನೂ ತಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಜಯ್ ಶಂಕರ್ ಹೇಳಿದ್ದಾರೆ.
‘ಕಾರ್ತಿಕ್ ಕೊನೆ ಬಾಲ್ ಸಿಕ್ಸರ್ ಬಾರಿಸದಿದ್ದರೆ ನನ್ನ ಗತಿ ಏನಾಗುತಿತ್ತು ಎಂದು ಈಗಲೂ ಯೋಚಿಸುತ್ತೇನೆ. ಪಂದ್ಯವನ್ನು ನಾವು ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ನಾನು ಮಾಡಿದ ತಪ್ಪಿನಿಂದ ಕೊನೆ ಎಸೆತದ ವರೆಗೂ ಹೋರಾಡ ಬೇಕಾಯಿತು. ಪಂದ್ಯ ಮುಕ್ತಾಯಗೊಂಡ ಬಳಿಕ ಹೋಟೆಲ್'ನಲ್ಲಿ ನನ್ನ ರೂಂಗೆ ಭೇಟಿ ನೀಡಿದ ಕಾರ್ತಿಕ್, ಸಮಾಧಾನಪಡಿಸಿ ಧೈರ್ಯ ತುಂಬಿದರು. ತಂಡಕ್ಕಾಗಿ ಪಂದ್ಯ ಗೆಲ್ಲುವವರೆಗೂ ನನಗೆ ಸಮಾಧಾನವಿಲ್ಲ’ ಎಂದು ಶಂಕರ್ ಹೇಳಿದ್ದಾರೆ.
ನಿದಾಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿಜಯ್ ಶಂಕರ್ ವಿಜಯ್ ಶಂಕರ್ 19 ಎಸೆತಗಳಲ್ಲಿ 17 ರನ್ ಬಾರಿಸಿ ಕೇವಲ ಒಂದು ಎಸೆತವಿದ್ದಾಗ ಔಟ್ ಆಗಿದ್ದರು. ಮರು ಎಸೆತದಲ್ಲಿ ಟೀಂ ಇಂಡಿಯಾ ಗೆಲ್ಲಲು 5 ರನ್ ಅವಶ್ಯಕತೆಯಿದ್ದಾಗ ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.