ಅಂಬೇಡ್ಕರ್'ರನ್ನು ಅವಮಾನಿಸಿದರಾ ಪಾಂಡ್ಯ..? ಬಯಲಾಯ್ತು ಪಾಂಡ್ಯ ಟ್ವೀಟ್ ಹಿಂದಿನ ರಹಸ್ಯ

By Suvarna Web DeskFirst Published Mar 22, 2018, 6:14 PM IST
Highlights

ಹಾರ್ದಿಕ್ ಪಾಂಡ್ಯ ಹೆಸರಿನ ನಕಲಿ ಅಕೌಂಟ್'ನಲ್ಲಿ 'ಯಾವ ಅಂಬೇಡ್ಕರ್..? ಕಾನೂನು ಹಾಗೂ ಸಂವಿಧಾನವನ್ನು ನಿರ್ಮಿಸಿದವರೋ ಅಥವಾ ದೇಶದಲ್ಲಿ ಮೀಸಲಾತಿ ಎಂಬ ರೋಗವನ್ನು ಹರಡಿದವರೋ ಎಂದು ಬರೆಯಲಾಗಿತ್ತು. ಜತೆಗೆ #HegdeInsultsAmbedkar #TuesdayThoughts ಎಂಬ ಹ್ಯಾಷ್'ಟ್ಯಾಗ್ ಕೂಡಾ ಬಳಸಲಾಗಿತ್ತು.

ನವದೆಹಲಿ(ಮಾ.22): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವಮಾನಕಾರಿಯಾಗಿ ಟ್ವೀಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ರಾಜಸ್ತಾನ ಕೋರ್ಟ್ ಜೋಧ್'ಪುರ ಪೊಲೀಸರಿಗೆ ಎಫ್'ಐಆರ್ ದಾಖಲಿಸುವಂತೆ ಸೂಚಿಸಿತ್ತು. ಆದರೆ ಆ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಆ ಟ್ವಿಟರ್ ಖಾತೆ ನಕಲಿ ಎಂಬ ವಿಚಾರ ಬಯಲಾಗಿದೆ.

ಅಂಬೇಡ್ಕರ್ ಕುರಿತು ಅವಹೇಳನಾಕಾರಿಯಾಗಿ ಟ್ವೀಟ್ ಮಾಡಿದ ಅಕೌಂಟ್ @sirhardik3777 ಆಗಿದ್ದು, ಪಾಂಡ್ಯ ಅಧಿಕೃತ ಟ್ವಿಟರ್ ಅಕೌಂಟ್ @hardikpandya7 ಆಗಿದೆ. ಇದೀಗ ಆ ನಕಲಿ ಅಕೌಂಟ್ ನಿಷ್ಕ್ರಿಯ/ಡಿಲೀಟ್ ಮಾಡಲಾಗಿದೆ.

ಹಾರ್ದಿಕ್ ಪಾಂಡ್ಯ ಹೆಸರಿನ ನಕಲಿ ಅಕೌಂಟ್'ನಲ್ಲಿ 'ಯಾವ ಅಂಬೇಡ್ಕರ್..? ಕಾನೂನು ಹಾಗೂ ಸಂವಿಧಾನವನ್ನು ನಿರ್ಮಿಸಿದವರೋ ಅಥವಾ ದೇಶದಲ್ಲಿ ಮೀಸಲಾತಿ ಎಂಬ ರೋಗವನ್ನು ಹರಡಿದವರೋ ಎಂದು ಬರೆಯಲಾಗಿತ್ತು. ಜತೆಗೆ #HegdeInsultsAmbedkar #TuesdayThoughts ಎಂಬ ಹ್ಯಾಷ್'ಟ್ಯಾಗ್ ಕೂಡಾ ಬಳಸಲಾಗಿತ್ತು.

ಈ ಟ್ವೀಟ್ ಕುರಿತಂತೆ ರಾಷ್ಟ್ರೀಯ ಭೀಮ್ ಸೇನಾ ಸಂಘಟನೆಯ ಸದಸ್ಯ ಮೇಘವಾಲ್ ಮಂಗಳವಾರವಷ್ಟೇ ಕೋರ್ಟ್ ಮೆಟ್ಟಿಲೇರಿದ್ದರು.

click me!