ಫುಟ್ಬಾಲ್ ನೋಡಲು ಆಗುತ್ತಿಲ್ಲ: ನೇಯ್ಮರ್

Published : Jul 23, 2018, 01:35 PM IST
ಫುಟ್ಬಾಲ್ ನೋಡಲು ಆಗುತ್ತಿಲ್ಲ: ನೇಯ್ಮರ್

ಸಾರಾಂಶ

‘ನಾನು ಮತ್ತೆ ಫುಟ್ಬಾಲ್ ಆಡುವುದಿಲ್ಲ ಎಂದು ಹೇಳುತ್ತಿಲ್ಲ. ಸದ್ಯದ ಪರಿಸ್ಥಿತಿಯ ಮಟ್ಟಿಗೆ ಚೆಂಡನ್ನು ನೋಡಲು ಅಥವಾ ಫುಟ್ಬಾಲ್ ಪಂದ್ಯಗಳನ್ನು ನೋಡಲು ಬಯಸುತ್ತಿಲ್ಲ’ ಎಂದು ನೇಯ್ಮರ್ ತಿಳಿಸಿದ್ದಾರೆ.

ಯಾ ಗ್ರಾಂಡೆ (ಬ್ರೆಜಿಲ್): ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಸೋಲುಂಡ ಬಳಿಕ ನನ್ನಿಂದ ಫುಟ್ಬಾಲ್ ವೀಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬ್ರೆಜಿಲ್ ತಂಡದ ತಾರಾ ಆಟಗಾರ ನೇಯ್ಮರ್ ಹೇಳಿದ್ದಾರೆ.

‘ನಾನು ಮತ್ತೆ ಫುಟ್ಬಾಲ್ ಆಡುವುದಿಲ್ಲ ಎಂದು ಹೇಳುತ್ತಿಲ್ಲ. ಸದ್ಯದ ಪರಿಸ್ಥಿತಿಯ ಮಟ್ಟಿಗೆ ಚೆಂಡನ್ನು ನೋಡಲು ಅಥವಾ ಫುಟ್ಬಾಲ್ ಪಂದ್ಯಗಳನ್ನು ನೋಡಲು ಬಯಸುತ್ತಿಲ್ಲ’ ಎಂದು ನೇಯ್ಮರ್ ತಿಳಿಸಿದ್ದಾರೆ. ‘ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿನ ಬಳಿಕ ಬಹಳ ದುಃಖದಲ್ಲಿದ್ದೆ. ಆ ಬಗ್ಗೆ ನನಗೆ ತುಂಬಾ ಬೇಸರವಿದೆ. ಅದರಿಂದ ಹೊರಬರಬೇಕಿದೆ. ಏಕೆಂದರೆ, ನನ್ನ ಮಗನಿದ್ದಾನೆ, ನನ್ನ ಕುಟುಂಬ ಹಾಗೂ ಸ್ನೇಹಿತರಿದ್ದಾರೆ. ಅವರೆಲ್ಲಾ ನಾನು ವಿಷಾದದಲ್ಲಿರುವುದನ್ನು ನೋಡಲು ಬಯಸುವುದಿಲ್ಲ. ದುಃಖ ಪಡುವುದಕ್ಕಿಂತ ಖುಷಿಯಾಗಿರಲು ನನ್ನ ಬಳಿ ಸಾಕಷ್ಟು ಕಾರಣಗಳಿವೆ’ ಎಂದಿದ್ದಾರೆ.

ಇನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಗೆ ನೇಯ್ಮರ್, ‘ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಏನು ಮಾಡುತ್ತೇನೆ ಎಂಬುದಕ್ಕಿಂತ ಹೆಚ್ಚಿಗೆ ಮಾಧ್ಯಮಗಳಿಗೆ
ಗೊತ್ತು. ಇಂತಹ ಕಥೆಗಳಿಗೆ ನಾನು ಹೆಚ್ಚಿನ ಬೆಲೆ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?