ಗೆಳತಿಯನ್ನು ವರಿಸಿದ ಮಹಿಳಾ ಕ್ರಿಕೆಟರ್

Published : Apr 20, 2019, 02:25 PM IST
ಗೆಳತಿಯನ್ನು ವರಿಸಿದ ಮಹಿಳಾ ಕ್ರಿಕೆಟರ್

ಸಾರಾಂಶ

ಆಸ್ಟ್ರೇಲಿಯನ್ ಗೆಳತಿಯನ್ನು ವರಿಸಿದ ನ್ಯೂಜಿಲ್ಯಾಂಡ್ ಮಹಿಳಾ ಕ್ರಿಕೆಟರ್| ಬಿಗ್ ಬ್ಯಾಶ್ ಲೀಗ್ ನಲ್ಲಿ ಒಂದೇ ತಂಡದ ಪರವಾಗಿ ಆಡಿದ್ದ ಮಹಿಳಾ ಕ್ರಿಕೆಟ್ ತಾರೆಯರು|

ವೆಲ್ಲಿಂಗ್ಟನ್[ಏ.20]: ನ್ಯೂಜಿಲ್ಯಾಂಡ್ ನ ಮಹಿಳಾ ಕ್ರಿಕೆಟರ್ ಹ್ಯಾಲೆ ಜೆನ್ಸನ್ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಹೆನ್ಕಾಕ್ ರನ್ನು ವರಿಸಿದ್ದಾರೆ. ಇವರಿಬ್ಬರೂ  ಮೊದಲ ಬಾರಿ 'ಮೆಲ್ಬರ್ನ್ ಸ್ಟಾರ್ಸ್' ತಂಡದ ಪರವಾಗಿ ಆಟವಾಡಿದ್ದರು. ಜೆನ್ಸನ್ ಎರಡು ವರ್ಷ ಮೆಲ್ಬರ್ನ್ ಸ್ಟಾರ್ಸ್ ತಂಡದ ಪರವಾಗಿ ಆಡಿದ್ದರು. ಬಳಿಕ ಮೆಲ್ಬರ್ನ್ ರೆನೆಗೆಡ್ಸ್ ತಂಡಕ್ಕೆ ಸೇರ್ಪಡೆಗೊಂಡರು. ಆದರೆ ಹೆನ್ಕಾಕ್ ಮಾತ್ರ ತಮ್ಮ ತಂಡವನ್ನು ಬದಲಾಯಿಸಿಕೊಂಡಿಲ್ಲ. ಕಳೆದ ವಾರಾಂತ್ಯದಲ್ಲಿ ಈ ಸ್ಟಾರ್ ಕ್ರಿಕೆಟ್ ಜೋಡಿ ಮದುವೆಯಾಗಿದ್ದಾರೆ.

ಬಿಗ್ ಬ್ಯಾಶ್ ಲೀಗ್ ಮೆಲ್ಬರ್ನ್ ಸ್ಟಾರ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿವಾಹದ ಮಾಹಿತಿ ನೀಡಿದೆ ಹಾಗೂ ಈ ಇಬ್ಬರೂ ಕ್ರಿಕೆಟರ್ ಗಳ ವೈವಾಹಿಕ ಜೀವನಕ್ಕೆ ಶುಭ ಕೋರಿದೆ. 

26 ವರ್ಷದ ಜೆನ್ಸನ್ 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತರಾಷ್ಟ್ರೀಯ ಡೆಬ್ಯೂ ಮಾಡಿದ್ದರು. ಇನ್ನು 23 ವರ್ಷದ ಹೆನ್ಕಾಕ್ ಕಳೆದ BBL ಸೀಜನ್ ನಲ್ಲಿ ನಡೆದ 14 ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸುವ ಮೂಲಕ ದ್ವಿತೀಯ ಸ್ಟಾರ್ ಬೌಲರ್ ಪಟ್ಟ ಗಳಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?