ರಾಂಚಿಯಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ ಸೋಲು; ಸರಣಿ ಇನ್ನೂ ಜೀವಂತ

Published : Oct 26, 2016, 03:52 PM ISTUpdated : Apr 11, 2018, 12:35 PM IST
ರಾಂಚಿಯಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ ಸೋಲು; ಸರಣಿ ಇನ್ನೂ ಜೀವಂತ

ಸಾರಾಂಶ

ನ್ಯೂಜಿಲೆಂಡ್ ತಂಡ ಈ ಗೆಲುವಿನೊಂದಿಗೆ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಐದು ಪಂದ್ಯಗಳ ಸರಣಿ ಜೀವಂತವಾಗಿ ಉಳಿದುಕೊಂಡಿದೆ. ಅ.29ರಂದು ನಡೆಯಲಿರುವ ಕೊನೆಯ ಪಂದ್ಯವು ಸರಣಿಯ ವಿಜೇತರನ್ನು ನಿರ್ಧರಿಸಲಿದೆ.

ರಾಂಚಿ(ಅ. 26): ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಇಂದು ನಡೆದ ಪಂದ್ಯದಲ್ಲಿ ಭಾರತ ತಂಡ ವಿರುದ್ಧ ನ್ಯೂಜಿಲೆಂಡ್ 19 ರನ್'ಗಳಿಂದ ಗೆಲುವು ಪಡೆದಿದೆ. ಗೆಲ್ಲಲು 261 ರನ್ ಗುರಿ ಪಡೆದ ಭಾರತದ ಇನ್ನಿಂಗ್ಸ್ 241 ರನ್'ಗೆ ಮುಕ್ತಾಯಗೊಂಡಿತು. ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಹೊರತುಪಡಿಸಿದರೆ ಉಳಿದ ಬ್ಯಾಟುಗಾರರು ವಿಫಲರಾದರು. ತಂಡದ ಮಧ್ಯಮ ಕ್ರಮಾಂಕದ ದೌರ್ಬಲ್ಯ ಮತ್ತೊಮ್ಮೆ ಬೆಳಕಿಗೆ ಬಂದಿತು. ಕಿವೀಸ್ ಪಡೆಯ ಜಾಣತನದ ಬೌಲಿಂಗ್ ತಂತ್ರಕ್ಕೆ ಭಾರತೀಯ ಬ್ಯಾಟುಗಾರರು ಬಲಿಯಾದರು. ಕೊನೆಕೊನೆಯಲ್ಲಿ ಬಾಲಂಗೋಚಿಗಳಾದ ಧವಳ್ ಕುಲಕರ್ಣಿ ಮತ್ತು ಉಮೇಶ್ ಯಾದವ್ ಒಂದಷ್ಟು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದದ್ದು ಭಾರತದ ಪಾಲಿನ ಭಾಗ್ಯವೆನಿಸಿತು. ಧವಳ್ ಕುಲಕರ್ಣಿ ಅಜೇಯ 25 ರನ್ ಗಳಿಸಿ ಗಮನ ಸೆಳೆದರು.

ಇದಕ್ಕೆ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 50 ಓವರ್'ನಲ್ಲಿ 7 ವಿಕೆಟ್ ನಷ್ಟಕ್ಕೆ 260 ರನ್ ಕಲೆ ಹಾಕಿದೆ. ಅಗ್ರ ಕ್ರಮಾಂಕದ ಆಟಗಾರರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದಿದ್ದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಬೃಹತ್ ಮೊತ್ತ ದಾಖಲಿಸುವ ಕುರುಹು ನೀಡಿತ್ತು. ಆದರೆ, ಇನ್ನಿಂಗ್ಸ್'ನ ಕೊನೆಯ 15 ಓವರ್'ನಲ್ಲಿ ಭಾರತೀಯ ಬೌಲರ್'ಗಳು ಕಂಬ್ಯಾಕ್ ಮಾಡಿ ಎದುರಾಳಿಗಳನ್ನು ಕಟ್ಟಿಹಾಕಿದರು. ಮಾರ್ಟಿನ್ ಗುಪ್ಟಿಲ್ 72 ರನ್ ಭಾರಿಸಿ ತಂಡಕ್ಕೆ ಒಳ್ಳೆಯ ಆರಂಭ ಕೊಟ್ಟರು. ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಇದೇ ವೇಳೆ, ನ್ಯೂಜಿಲೆಂಡ್ ತಂಡ ಈ ಗೆಲುವಿನೊಂದಿಗೆ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಐದು ಪಂದ್ಯಗಳ ಸರಣಿ ಜೀವಂತವಾಗಿ ಉಳಿದುಕೊಂಡಿದೆ. ಅ.29ರಂದು ನಡೆಯಲಿರುವ ಕೊನೆಯ ಪಂದ್ಯವು ಸರಣಿಯ ವಿಜೇತರನ್ನು ನಿರ್ಧರಿಸಲಿದೆ.

ನ್ಯೂಜಿಲೆಂಡ್ 50 ಓವರ್ 260/7
(ಮಾರ್ಟಿನ್ ಗುಪ್ಟಿಲ್ 72, ಕೇನ್ ವಿಲಿಯಮ್ಸನ್ 41, ಟಾಮ್ ಲಾಥಾಮ್ 39, ರಾಸ್ ಟೇಲರ್ 35 ರನ್ - ಅಮಿತ್ ಮಿಶ್ರಾ 42/2)

ಭಾರತ 48.4 ಓವರ್ 241 ರನ್ ಆಲೌಟ್
(ಅಜಿಂಕ್ಯ ರಹಾನೆ 57, ವಿರಾಟ್ ಕೊಹ್ಲಿ 45, ಅಕ್ಷರ್ ಪಟೇಲ್ 38, ಧವಳ್ ಕುಲಕರ್ಣಿ ಅಜೇಯ 25 ರನ್ - ಟಿಮ್ ಸೌಥೀ 40/3, ಜೇಮ್ಸ್ ನೀಶಮ್ 38/2, ಟ್ರೆಂಟ್ ಬೌಲ್ಟ್ 48/2)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!