ಸಿಬಿಐಗೆ ನರಸಿಂಗ್ ಪ್ರಕರಣ

By Web DeskFirst Published Oct 7, 2016, 2:48 PM IST
Highlights

ನವದೆಹಲಿ(ಅ.07): ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಅವರ ಉದ್ದೀಪನಾ ಮದ್ದು ಸೇವನೆ ಪ್ರಕರಣವನ್ನು ಹರಿಯಾಣ ಸರ್ಕಾರ ಕೇಂದ್ರಿಯ ತನಿಖಾ ದಳ (ಸಿಬಿಐ)ಗೆ ವಹಿಸಿದೆ.

ರಾಷ್ಟ್ರೀಯ ಉದ್ದೀಪನಾ ವಿರೋ ಘಟಕ (ನಾಡಾ) ನರಸಿಂಗ್ ಅವರನ್ನು ಪರೀಕ್ಷಿಸಿದ್ದು, ಮದ್ದು ಸೇವಿಸಿರುವುದು ಸಾಭೀತಾಗಿತ್ತು. ಹೀಗಾಗಿ ನರಸಿಂಗ್ ರಿಯೊ ಒಲಿಂಪಿಕ್ಸ್ ಕೂಟದಿಂದ ಹೊರಬಿದ್ದಿದ್ದರು.

ಇಲ್ಲಿನ ಸೋನಿಪಟ್ ಜಿಲ್ಲೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಕಾರ (ಸಾಯ್)ನಲ್ಲಿ ತರಬೇತಿ ಪಡೆಯುವಾಗ ಊಟದಲ್ಲಿ ನಿಷೇತ ಮದ್ದನ್ನು ಬೆರೆಸಿಕೊಟ್ಟಿದ್ದಾರೆಂದು ನರಸಿಂಗ್ ಆರೋಪಿಸಿದ್ದರು. ಆ ವೇಳೆ ನರಸಿಂಗ್ ಅವರಿಗೆ ಯುವ ಕುಸ್ತಿಪಟು ದೆಹಲಿಯ ಜಿತೇಶ್ ಕುಮಾರ್ ಊಟ ನೀಡಿದ್ದರು ಎಂಬುದು ರೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಹೇಳಲಾಗಿದೆ.

 

click me!