
ರಾಂಚಿ(ಅ.07): ವಿಶ್ವಾದ್ಯಂತ ಕ್ರೀಡಾಪಟುಗಳಿಗೆ ಒಂದು ಕ್ರೇಜ್ ಇರುತ್ತೆ. ಲಕ್ಸುರಿ ಕಾರು, ಸೂಪರ್ ಬೈಕ್, ಎಸ್`ಯುವಿ ಹೀಗೆ ತುಂಬಾ ವಿಶೇಷವಾದ ವಾಹನಗಳನ್ನ ಇಟ್ಟುಕೊಳ್ಳಬೇಕು ಎಂಬುದು. ಟೀಮ್ ಇಂಡಿಯಾ ಮೋಸ್ಟ್ ಸಕ್ಸ್`ಫುಲ್ ಕ್ಯಾಪ್ಟನ್ ಧೋನಿಯೂ ಇದರಿಂದ ಹೊರತಾಗಿಲ್ಲ. ಧೋನಿ ಬಳಿಯೂ ತರಹೇವಾರಿ ಬೈಕ್`ಗಳ ಸಂಗ್ರಹವೇ ಇದೆ.
ಧೋನಿ ಬಳಿ ಹಲವು ಬೈಕ್`ಗಳಿವೆ. ಅದರಲ್ಲಿ ಅವರ ಹೃದಯಕ್ಕೆ ಹತ್ತಿರವಾದದ್ದು jet black Hellcat X132 ಲಿಮಿಟೇಡ್ ಎಡಿಶನ್ ಈ ಬೈಕ್`ಗೆ 28 ಲಕ್ಷ ವರೂಪಾಯಿ ಕೊಟ್ಟು ಕಾನ್ಫೆಡರೇಟ್ ಮೋಟಾರ್ಸ್`ನಿಂದ ಧೋನಿ ಖರೀದಿಸಿದ್ದರು. ಏರ್`ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂ, ಕಾರ್ಬನ್ ಫೈಬರ್ ಅನ್ನ ಬಳಸಲಾಗಿದೆ. 2163cc ಬೈಕ್ ಇದಾಗಿದೆ.
ಇದರ ಜೊತೆಗೆ ಎನ್`ಫೀಲ್ಡ್ ಮೆಚಿಸ್ಮೋ, ಯಮಹಾ ಥಂಡರ್ ಕ್ಯಾಟ್, ಯಮಹಾ ಆರ್ಎಕ್ ಝೆಡ್-135, ಹಾರ್ಲೆ ಡೇವಿಡ್`ಸನ್ಸ್, ಯಮಹಾ ಆರ್ಡಿ 350, ಡುಕಾಟಿ 10985 ಮತ್ತು ಕವಾಸಕಿ ನಿಂಜ ಝೆಡ್14-ಆರ್ ಬೈಕ್`ಗಳು ಧೋನಿ ಬಳಿ ಇವೆ.
.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.