IOC ಸದಸ್ಯರಾಗಿ ನರೀಂದರ್ ಬಾತ್ರಾ ಆಯ್ಕೆ

By Web DeskFirst Published Jun 28, 2019, 1:41 PM IST
Highlights

ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ನರೀಂದರ್ ಧ್ರುವ್ ಬಾತ್ರಾ ಇದೀಗ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ನವದೆಹಲಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸದಸ್ಯರಾಗಿ ಆಯ್ಕೆಯಾದ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಧ್ರುವ್ ಬಾತ್ರಾ ಅವರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.

Our heartiest congratulations to Dr. Narinder Dhruv Batra - President, and President, , on being elected as a Member of International Olympic Committee (IOC). Read more: https://t.co/b3JarG3s29 pic.twitter.com/FR139V8uTu

— Hockey India (@TheHockeyIndia)

ಬುಧವಾರ ಲುಸಾನ್ನೆಯಲ್ಲಿ ನಡೆದ ಐಒಸಿ ಚುನಾವಣೆಯಲ್ಲಿ ಬಾತ್ರಾ 58 ಮತಗಳನ್ನು ಪಡೆದರು. ಬಾತ್ರಾ ಈ ಹಿಂದೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ಅಧ್ಯಕ್ಷರಾದ ಭಾರತದ ಮೊದಲಿಗ ಎನಿಸಿದ್ದಾರೆ.

Narinder Dhruv Batra (India) - elected as IOC Member as NOC President India

— IOC MEDIA (@iocmedia)

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಹೊಸ 10 ರಾಷ್ಟ್ರಗಳು ಸೇರ್ಪಡೆಗೊಂಡಿದ್ದು, ಇದೀಗ IOC ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 105ಕ್ಕೇ ಏರಿಕೆಯಾಗಿದೆ.

click me!