ಮೈಸೂರಿನ 'ಚಿನ್ನದ ಹುಡುಗಿ'ಯ ಕಂಚಿನ ಸಾಧನೆ! ಬಾಲ್ಯದ ಕಷ್ಟಗಳನ್ನು ಮೆಟ್ಟಿ ನಿಂತು ಕಾಮನ್‌ವೆಲ್ತ್‌ನಲ್ಲಿ ಇತಿಹಾಸ ಬರೆದ ಎಸ್.ಕೆ. ಶಿಲ್ಪಾ!

Published : Jul 28, 2026, 10:56 PM IST
Shilpa

ಸಾರಾಂಶ

ಮೈಸೂರಿನ ಶ್ಕೆ. ಎಸ್. ಶಿಲ್ಪಾ ಅವರು ಕಾಮನ್‌ವೆಲ್ತ್ ಕ್ರೀಡಾಕೂಟ-2026ರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಬಾಲ್ಯದ ದೈಹಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಮೀರಿ ಅವರು ಮಾಡಿದ ಈ ಸಾಧನೆಯು, ನಾಡಿನ ಯುವಜನತೆಗೆ ಮತ್ತು ವಿಕಲಚೇತನರಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟ-2026ರ ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಮಗಳು ಶ್ಕೆ. ಎಸ್. ಶಿಲ್ಪಾ ಭಾರತ ಹಾಗೂ ಕರ್ನಾಟಕದ ಕೀರ್ತಿಪತಾಕೆಯನ್ನು ಜಗತ್ತಿನಾದ್ಯಂತ ಹಾರಿಸಿದ್ದಾರೆ. 

ಸಾಮಾಜಿಕ ಸವಾಲುಗಳಿಗೆ ಸೆಡ್ಡು ಹೊಡೆದ ಶಿಲ್ಪಾ!

ಬಾಲ್ಯದಲ್ಲೇ ಎದುರಾದ ದೈಹಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಲೆಕ್ಕಿಸದೆ, ಅಚಲ ಆತ್ಮವಿಶ್ವಾಸ, ದೃಢಸಂಕಲ್ಪ ಮತ್ತು ಅವಿರತ ಪರಿಶ್ರಮದಿಂದ ಮೈದಾನಕ್ಕಿಳಿದ ಶಿಲ್ಪಾ, ಇಂದು ಇಡೀ ಕನ್ನಡಿಗರು ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರ ಈ ಹೋರಾಟದ ಮನೋಭಾವ ಮತ್ತು ಸೋಲೊಪ್ಪದ ಛಲವು ನಾಡಿನ ಕೋಟ್ಯಂತರ ಯುವಜನತೆಗೆ ಹಾಗೂ ವಿಕಲಚೇತನರಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ.

ಜಾಗತಿಕ ವೇದಿಕೆಯಲ್ಲಿ ಕನ್ನಡದ ಮೆರುಗು!

ಕನ್ನಡ ಮಣ್ಣಿನ ಗುಣವಾದ 'ಛಲ' ಮತ್ತು 'ಸಾಧನೆ'ಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿ, ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದಿರುವ ಮೈಸೂರಿನ ಈ ಕುವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಪದಕಗಳನ್ನು ಗೆದ್ದು ಭಾರತ ಹಾಗೂ ನಮ್ಮ ಹೆಮ್ಮೆಯ ಕರ್ನಾಟಕಕ್ಕೆ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂದು ಹಾರೈಸೋಣ ಎಂದು ಸಂಸದ ಬಿ.ವೈ.ವಿಜಯೇಂದ್ರ ಅವರು ಶುಭ ಹಾರೈಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Sourav Ganguly: ದಾದಾ ನೋ ಅಂದರೂ ಮನೆಗೆ ಬಂದ ರಾಜಕೀಯ! ಗಂಗೂಲಿ ಕುಟುಂಬದಿಂದ ಅಖಾಡಕ್ಕಿಳಿದ ಆ ವ್ಯಕ್ತಿ ಸೇರಿದ್ದು ಯಾವ ಪಕ್ಷ?
ಟೀಮ್ ಇಂಡಿಯಾಗೆ ಸಿಕ್ಕಾಯ್ತು ಮತ್ತೊಂದು ಬೌಲಿಂಗ್ ಅಸ್ತ್ರ! ಕನ್ನಡಿಗನ ಬಗ್ಗೆ ದಿಗ್ಗಜ ಮೆಕ್‌ಗ್ರಾತ್ ಮೆಚ್ಚುಗೆಯ ಮಾತು.!