ಆಂಗ್ಲರಿಗೆ ದಿಟ್ಟ ತಿರುಗೇಟು ನೀಡಿದ ಟೀಂ ಇಂಡಿಯಾ

By Suvarna Web DeskFirst Published Dec 9, 2016, 12:21 PM IST
Highlights

ಅಶ್ವಿನ್ ತನ್ನ ಬುಟ್ಟಿಗೆ ಆರು ವಿಕೆಟ್ ಹಾಕಿಕೊಂಡರೆ, ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಮುಂಬೈ(ಡಿ.09): ಆರಂಭಿಕ ಆಟಗಾರ ಮುರಳಿ ವಿಜಯ್ ಹಾಗೂ ಟೆಸ್ಟ್ ಸ್ಪೆಷಾಲಿಷ್ಟ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆಂಗ್ಲರಿಗೆ ಟೀಂ ಇಂಡಿಯಾ ದಿಟ್ಟ ತಿರುಗೇಟು ನೀಡಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್'ನ ಎರಡನೇ ದಿನದಾಟ ಮುಕ್ತಾಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿದೆ. ಇನಿಂಗ್ಸ್ ಆರಂಭಿಸಿದ ಮುರುಳಿ ವಿಜಯ್ ಹಾಗೂ ಕೆ.ಎಲ್ ರಾಹುಲ್ ಉತ್ತಮ ಜೊತೆಯಾಟ ಆಡುವ ಮುನ್ಸೂಚನೆ ನೀಡಿದರು. ಆದರೆ ರಾಹುಲ್ 24 ರನ್'ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ನಂತರ ಮುರುಳಿ ವಿಜಯ್ (70*) ಅವರನ್ನು ಕೂಡಿಕೊಂಡ ಚೇತೇಶ್ವರ್ ಪೂಜಾರ (47*) ಎರಡನೇ ವಿಕೆಟ್'ಗೆ ಮುರಿಯದ 107 ರನ್'ಗಳ ಜೊತೆಯಾಟ ಆಡುವ ಮೂಲಕ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಎರಡನೇ ದಿನದಾಟ ಮುಕ್ತಾಯಕ್ಕೆ

ಸ್ಪಿನ್ ಮೋಡಿಗೆ ಆಂಗ್ಲರು ಕಂಗಾಲು:

ಇದಕ್ಕೂ ಮೊದಲು 288 ಗಳಿಗೆ 5 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಪಡೆಗೆ ಭಾರತೀಯ ಸ್ಪಿನ್ನರ್'ಗಳಾದ ಅಶ್ವಿನ್ ಹಾಗೂ ಜಡೇಜಾ ಮಾರಕವಾಗಿ ಪರಿಣಮಿಸಿದರು. ದಿನದಾಟದ ಆರಂಭದಲ್ಲೇ ಬೆನ್'ಸ್ಟ್ರೋಕ್ ಅವರಿಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು. ಇನ್ನೊಂದೆಡೆ ಚುರುಕಿನ ದಾಳಿ ನಡೆಸಿದ ಎಡಗೈ ಸ್ಪಿನ್ನರ್ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ದಿಟ್ಟ ಬ್ಯಾಟಿಂಗ್ ನಡೆಸಿದ ಜೋಸ್ ಬಟ್ಲರ್(76) ಗಳಿಸಿ ತಂಡವನ್ನು ಸವಾಲಿನ ಮೊತ್ತದತ್ತ ಸಾಗಿಸುವಲ್ಲಿ ಯಶಸ್ವಿಯಾದರು.

ಅಶ್ವಿನ್ ತನ್ನ ಬುಟ್ಟಿಗೆ ಆರು ವಿಕೆಟ್ ಹಾಕಿಕೊಂಡರೆ, ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಸ್ಕೋರ್ ವಿವರ:

ಭಾರತ: 146/1

ಮುರಳಿ ವಿಜಯ್: 70*

ಚೇತೇಶ್ವರ ಪೂಜಾರ: 47

ಇಂಗ್ಲೆಂಡ್: 400/10

ಕೇತನ್ ಜೆನ್ನಿಂಗ್ಸ್: 112

ಜೋಸ್ ಬಟ್ಲರ್: 76

ಅಶ್ವಿನ್ 112/6

ಜಡೇಜಾ 109/4

click me!