
ರಾಂಚಿ(ಅ.08): ತನ್ನ ಮೊಟ್ಟ ಮೊದಲ ರಣಜಿ ಅಭಿಯಾನವನ್ನು ಛತ್ತೀಸ್‌ಗಢ ಗೆಲುವಿನೊಂದಿಗೆ ಆರಂಭಿಸಿದೆ. ಅಂತೆಯೇ ರೋಹ್ಟಕ್‌ನಲ್ಲಿ ನಡೆದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಕೂಡ ಜಯದ ಆರಂಭ ಕಂಡಿತಲ್ಲದೆ, ಇತ್ತಂಡಗಳೂ 6 ಅಂಕ ಗಳಿಸಿದವು.
ತ್ರಿಪುರ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆದಿದ್ದ ಮೊಹಮದ್ ಕೈಫ್ ಸಾರಥ್ಯದ ಛತ್ತೀಸ್‌ಗಢ ತಂಡವು ಗೆಲುವಿಗೆ ಬೇಕಿದ್ದ 13 ರನ್‌ಗಳ ಜಯದ ಗುರಿಯನ್ನು 3.5 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಮುಟ್ಟಿತು. ಸಂಘಟಿತ ದಾಳಿಯೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್‌ಗೆ ಆಲೌಟ್ ಆಗಿದ್ದ ತ್ರಿಪುರಾ ವಿರುದ್ಧ ಅಶುತೋಷ್ ಸಿಂಗ್ (140) ಅವರ ಮನೋಜ್ಞ ಶತಕದಿಂದಾಗಿ 255 ರನ್‌ಗೆ ಆಲೌಟ್ ಆದ ಛತ್ತೀಸ್‌ಗಢ, ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಅಜಯ್ ಮಂಡಲ್ (55ಕ್ಕೆ 4) ತೋರಿದ ಚಮತ್ಕಾರಿ ಬೌಲಿಂಗ್ ನೆರವಿನೊಂದಿಗೆ ತ್ರಿಪುರಾವನ್ನು 149ಕ್ಕೆ ನಿಯಂತ್ರಿಸಿತು.
ಇನ್ನು ತಮಿಳುನಾಡಿನ ವಿರುದ್ಧ ಆಲ್ರೌಂಡ್ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಮುಂಬೈ 2 ವಿಕೆಟ್ ರೋಚಕ ಜಯ ಸಾಧಿಸಿತು. ಗೆಲ್ಲಲು 97 ರನ್ ಗುರಿ ಪಡೆದಿದ್ದ ಮುಂಬೈ, ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಕ್ರಿಸ್ಟ್ (43ಕ್ಕೆ 4), ಕೃಷ್ಣಮೂರ್ತಿ ವಿಘ್ನೇಶ್ (29ಕ್ಕೆ 4) ನಡೆಸಿದ ಜಂಟಿ ದಾಳಿಗೆ ಥರಗುಟ್ಟಿತಾದರೂ, ಮಧ್ಯಮ ಕ್ರಮಾಂಕದಲ್ಲಿ ಅಭಿಷೇಕ್ ನಾಯರ್ (45) ಅಜೇಯ ಆಟದೊಂದಿಗೆ ತಂಡಕ್ಕೆ ಜಯ ತಂದಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.