ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿರೋ ತಂಡದಲ್ಲಿ ಮೀಸಲು ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿದ್ದು ಯಾಕೆ? ಇಲ್ಲಿದೆ ವಿವರ
ಮುಂಬೈ(ಏ.15): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದೆ. 15 ಸದಸ್ಯರ ತಂಡದಲ್ಲಿ ವಿಕೆಟ್ ಕೀಪರ್ ಎಂ.ಎಸ್.ಧೋನಿಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ಮೀಸಲು ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ರೇಸ್‌ನಲ್ಲಿ ಕಾರ್ತಿಕ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್
undefined
ವಿಶ್ವಕಪ್ ಟೂರ್ನಿಗೆ ಪಂತ್ ಬದಲು ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿದ್ದು ಯಾಕೆ ಅನ್ನೋದನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಹೇಳಿದ್ದಾರೆ. ಮೀಸಲು ವಿಕೆಟ್ ಕೀಪರ್ ಆಯ್ಕೆಯಲ್ಲಿ ಪಂತ್ ಹಾಗೂ ಕಾರ್ತಿಕ್ ನಡುವೆ ಪೈಪೋಟಿ ಇತ್ತು. ಪಂತ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಆದರೆ ಮೀಸಲು ವಿಕೆಟ್ ಕೀಪರ್ ಜವಾಬ್ದಾರಿಗೆ ಸಮರ್ಥ ಕೀಪರ್ ಅವಶ್ಯಕತೆ ಇತ್ತು. ಹೀಗಾಗಿ ಕಾರ್ತಿಕ್‌ಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ- ಇವರಿಗೆ ಶಾಕ್ ನೀಡಿದ ಬಿಸಿಸಿಐ!
ಐಪಿಎಲ್ ಆರಂಭಕ್ಕೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಆಯ್ಕೆ ಪ್ರಕ್ರಿಯೆ ಸುಳಿವು ಬಿಚ್ಚಿಟ್ಟಿದ್ದರು. ಐಪಿಎಲ್ ಪ್ರದರ್ಶನ ವಿಶ್ವಕಪ್ ಆಯ್ಕೆಗೆ ಮಾನದಂಡವಲ್ಲ ಎಂದಿದ್ದಾರೆ. ಇದು ನಿಜವಾಗಿದೆ. ಕಾರಣ 2019ರ ಐಪಿಎಲ್ ಟೂರ್ನಿಯ ಇಲ್ಲೀವರೆಗಿನ ಪಂದ್ಯದಲ್ಲಿ ಪಂತ್, ಕಾರ್ತಿಕ್‌ಗಿಂತ ಹೆಚ್ಚಿನ ರನ್ ಸಿಡಿಸಿದ್ದಾರೆ. ಇಷ್ಟಾದರೂ ದಿನೇಶ್ ಕಾರ್ತಿಕ್‌ಗೆ ಮಣೆ ಹಾಕಲಾಗಿದೆ.