ವಾಂಖೆಡೆಯಲ್ಲಿ ಗವಾಸ್ಕರ್ ಸ್ಟಾಂಡ್, ದೆಹಲಿಯಲ್ಲಿ ಸೆಹ್ವಾಗ್ ಸ್ಟಾಂಡ್ ಇದ್ದಂತೆ ಇದೀಗ ರಾಂಚಿಯಲ್ಲಿ ಧೋನಿ ಸ್ಟಾಂಡ್ ಸಿದ್ಧವಾಗಿದೆ. ಆದರೆ ಇದನ್ನ ಉದ್ಘಾಟಿಸಲು ಎಂ.ಎಸ್.ಧೋನಿ ನಿರಾಕರಿಸಿದ್ದಾರೆ. ಇದಕ್ಕೆ ಧೋನಿ ನೀಡಿದ ಕಾರಣವೇನು? ಇಲ್ಲಿದೆ.
ರಾಂಚಿ(ಮಾ.06): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯಕ್ಕೆ ರಾಂಚಿ ಕ್ರೀಡಾಂಗಣ ಆತಿಥ್ಯವಹಿಸಿದೆ. ಎಂ.ಎಸ್.ಧೋನಿ ಹುಟ್ಟೂರು ರಾಂಚಿಯಲ್ಲಿ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಪಂದ್ಯದ ದಿನ ಕ್ರೀಡಾಂಗಣದಲ್ಲಿ ಧೋನಿ ಪೆವಿಲಿಯನ್ ಉದ್ಘಾಟನೆ ಮಾಡಲು ಧೋನಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ರಾಂಚಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಧೋನಿ ನೀಡಿದ್ರು ಸರ್ಪ್ರೈಸ್!
ಜಾರ್ಖಂಡನ ಕ್ರಿಕೆಟ್ ಸಂಸ್ಥೆ ಕಳೆದ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪೆವಿಲಿಯನ್ ಸ್ಟಾಂಡ್‌ಗೆ ಧೋನಿ ಪೆವಿಲಿಯನ್ ಹೆಸರಿಡು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಧೋನಿ ಪೆವಿಲಿಯನ್ ಸಜ್ಜಾಗಿದೆ. ಇನ್ನ ಆಸಿಸ್ ವಿರುದ್ಧದ 3ನೇ ಏಕದಿನದಲ್ಲಿ ಧೋನಿ ಕೈಯಿಂದಲೇ ಪೆವಿಲಿಯನ್ ಉದ್ಧಾಟಿಸಲು ನಿರ್ಧರಿಸಲಾಗಿತ್ತು. ಆದರೆ ಇದನ್ನ ಧೋನಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ತವರಿನಲ್ಲಿ ಹೊಸ ದಾಖಲೆ ನಿರ್ಮಿಸಲು ಸಜ್ಜಾದ ಧೋನಿ
ನನ್ನ ಮನೆಯಲ್ಲಿ ಉದ್ಘಾಟನೆ ಮಾಡಲು ಏನಿದೆ? ಎಂದು ಧೋನಿ ಹೇಳಿದ್ದಾರೆ. ಇದು ಶ್ರೇಷ್ಠ ಕ್ರಿಕೆಟಿಗನ ಸರಳತೆಯನ್ನ ಸೂಚಿಸುತ್ತದೆ ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ದೇಬಸಿಸ್ ಚಕ್ರಬೊರ್ತಿ ಹೇಳಿದ್ದಾರೆ.