ಮತ್ತೆ ಭುಗಿಲೆದ್ದ ಫಿಕ್ಸಿಂಗ್ - ಮಂಡಳಿ ಅಧ್ಯಕ್ಷನಿಗೆ 10 ವರ್ಷ ನಿಷೇಧ ಶಿಕ್ಷೆ!

By Web DeskFirst Published Mar 6, 2019, 9:11 PM IST
Highlights

ಕ್ರಿಕೆಟ್ ಆಟವನ್ನು ಕಳ್ಳಾಟದಿಂದ ಮುಕ್ತವಾಗಿರಿಸಲು ಐಸಿಸಿ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಐಸಿಸಿ ಕಣ್ತಪ್ಪಿಸಿ ಭ್ರಷ್ಟಾಚಾರ ನಡೆಸಲು ಮುಂದಾದ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಅಧಿಕಾರಿಗೆ ಶಿಕ್ಷೆ ವಿಧಿಸಲಾಗಿದೆ.

ಜಿಂಬಾಬ್ವೆ(ಮಾ.06): ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ನಡೆಸಲು ಯತ್ನಿಸಿದ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟ್ ಅಧಿಕಾರಿಗೆ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಈ ಮೂಲಕ ಫಿಕ್ಸಿಂಗ್ ನಡೆಸುವ ಪ್ರತಿಯೊಬ್ಬರಿಗೂ ಐಸಿಸಿ ಸ್ಪಷ್ಟ ಸೂಚನೆ ರವಾನೆ ಮಾಡಿದೆ.

ಇದನ್ನೂ ಓದಿ: ರಾಂಚಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಧೋನಿ ನೀಡಿದ್ರು ಸರ್ಪ್ರೈಸ್!

2017ರಲ್ಲಿ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆಗೆ ಪ್ರವಾಸ ಮಾಡಿತ್ತು. ಈ ವೇಳೆ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮಾಜಿ ಅಧಿಕಾರಿ ರಾಜನ್ ನಾಯೆರ್‌ ಹಾಗೂ ಮಾಜಿ ಅಧ್ಯಕ್ಷ ಎನಾಕ್ ಐಕೊಪ್‌ಗೆ ಫಿಕ್ಸಿಂಗ್ ನಡೆಸಲು ಯತ್ನಿಸಿದ್ದರು. ಜಿಂಬಾಬ್ವೆ ನಾಯಕ ಗ್ರೇಮ್ ಕ್ರೀಮರ್‌ಗೆ ಹಣದ ಆಮಿಷ ಒಡ್ಡಿದ್ದರು.

ಇದನ್ನೂ ಓದಿ: ಜಡೇಜಾ ದಾಖಲೆ- ಸಚಿನ್, ಕಪಿಲ್ ದೇವ್ ಸಾಲಿಗೆ ಸೇರಿದ ಆಲ್ರೌಂಡರ್!

ಕ್ರೀಮರ್ ಕೋಚ್ ಹಾಗೂ ಐಸಿಸಿಗೆ ಈ ಕುರಿತು ತಿಳಿಸಿದ್ದರು. ಹೀಗಾಗಿ ತನಿಖೆ ನಡೆಸಿದ ಐಸಿಸಿ ಇದೀಗ ಶಿಕ್ಷೆ ಪ್ರಕಟಿಸಿದೆ. ತನಿಖೆಗೆ ಸಹಕರಿಸಿದ ರಾಜನ್ ನಾಯೆರ್‌‌ಗೆ 20 ವರ್ಷ  ಹಾಗೂ ಐಕೊಪ್‌ಗೆ 10 ವರ್ಷ ನಿಷೇಧ ಶಿಕ್ಷೆ ವಿಧಿಸಿದೆ.
 

click me!