
ಓಲ್ಡ್ ಟ್ರಾಫೋರ್ಡ್(ಜು.03): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಟಂಪ್ ಮಾಡೋ ಮೂಲಕ ಧೋನಿ ದಾಖಲೆ ಬರೆದಿದ್ದಾರೆ.
ಕುಲದೀಪ್ ಯಾದವ್ ಎಸೆತದಲ್ಲಿ ಜಾನಿ ಬೈರಿಸ್ಟೋ ಹಾಗೂ ಜೋ ರೂಟ್ ಅವರನ್ನ ಸ್ಟಂಪ್ ಔಟ್ ಮಾಡಿದ ಎಂ ಎಸ್ ಧೋನಿ ಚುಟುಕು ಕ್ರಿಕೆಟ್‌ನಲ್ಲಿ 33 ಸ್ಟಂಪ್ ಔಟ್ ಮಾಡಿದ ಸಾಧನೆ ಮಾಡಿದರು. ಈ ಮೂಲಕ ಪಾಕಿಸ್ತಾನ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ದಾಖಲೆ ಮುರಿದರು.ಕಮ್ರಾನ್ ಅಕ್ಮಲ್ ಟಿ20 ಕ್ರಿಕೆಟ್‌ನಲ್ಲಿ 32 ಸ್ಟಂಪ್ ಔಟ್ ಮಾಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಟಂಪ್ ಔಟ್:
ಎಂ ಎಸ್ ಧೋನಿ(ಭಾರತ) - 33
ಕಮ್ರಾನ್ ಅಕ್ಮಲ್(ಪಾಕಿಸ್ತಾನ) -32
ಮೊಹಮ್ಮದ್ ಶೆಹಝಾದ್(ಅಫ್ಘಾನಿಸ್ತಾನ)- 28
ಮುಶಿಫಿಕರ್ ರಹೀಮ್(ಬಾಂಗ್ಲಾದೇಶ) -26
ಕುಮಾರ ಸಂಗಕ್ಕಾರ(ಶ್ರೀಲಂಕ) - 20
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.