ಎಂ ಎಸ್ ಧೋನಿ ಜೀವನಚರಿತ್ರೆ ಫಿಲ್ಮ್ ಪಾರ್ಟ್ 2 ಬಿಡುಗಡೆಗೆ ಸಿದ್ಧತೆ

Published : Jul 04, 2018, 04:20 PM IST
ಎಂ ಎಸ್ ಧೋನಿ ಜೀವನಚರಿತ್ರೆ ಫಿಲ್ಮ್ ಪಾರ್ಟ್ 2 ಬಿಡುಗಡೆಗೆ ಸಿದ್ಧತೆ

ಸಾರಾಂಶ

ಎಂ ಎಸ್ ಧೋನಿ ಜೀವನಚರಿತ್ರೆ ಆಧಾರಿತ ಎಂ ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ದಾಖಲೆ ಬರೆದಿತ್ತು. ಎಂ ಎಸ್ ಧೋನಿ ಬಾಲ್ಯ, ಕ್ರಿಕೆಟರ್‌ ಕರಿಯರ್‌ಗಾಗಿ ಧೋನಿ ಪಟ್ಟ ಶ್ರಮ ಸೇರಿದಂತೆ ಧೋನಿ ರೋಚಕ ಕತೆಗಳನ್ನೊಳಗೊಂಡ ಈ ಚಿತ್ರ ಅಭಿಮಾನಿಗಳಿಗೆ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಈ ಚಿತ್ರದ 2ನೇ ಭಾಗ ತೆರೆಗೆ ಬರಲು ಸಿದ್ದತೆ ನಡೆಯುತ್ತಿದೆ. ಹಾಗಾದರೆ ಈ ಚಿತ್ರದಲ್ಲಿನ ಪ್ರಮುಖ ಅಂಶಗಳು ಎನು? ಚಿತ್ರ ಯಾವಾಗ ತೆರೆಗೆ ಬರಲಿದೆ? ಇಲ್ಲಿದೆ ವಿವರ.

ಮುಂಬೈ(ಜು.04): ಟೀಂ ಇಂಡಿಯಾ ಮೋಸ್ಟ್ ಸಕ್ಸಸ್‌ಫುಲ್ ಕ್ರಿಕೆಟರ್ ಎಂ ಎಸ್ ಧೋನಿ ಜೀವನಾಧಾರಿತ ಎಂ ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಬಾಲಿವುಡ್ ಚಿತ್ರ 2016ರಲ್ಲಿ ಭಾರಿ ಸದ್ದು ಮಾಡಿತ್ತು. ಧೋನಿ ಯಶೋಗಾಥೆಯ ಈ ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಮಾತ್ರವಲ್ಲ, ಚಿತ್ರ ಪ್ರೀಯರ ಮೆಚ್ಚುಗೆಗೂ ಪಾತ್ರವಾಗಿತ್ತು.

ಎಂ ಎಸ್ ಧೋನಿ ಪಾತ್ರದಲ್ಲಿ ಕಾಣಿಸಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಧೋನಿಯನ್ನ ಆವಾಹಿಸಿಕೊಂಡು ನಟಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 2016ರ ಬಿಡುಗಡೆಯಾದ ಬಾಲಿವುಡ್ ಚಿತ್ರಗಳ ಗಳಿಕೆಯಲ್ಲಿ 5ನೇ ಸ್ಥಾನ ಪಡೆದಿತ್ತು. ಬರೋಬ್ಬರಿ 216 ಕೋಟಿ ಸಂಪಾದಿಸೋ ಮೂಲಕ ಜೀವನತ ಚರಿತ್ರೆ ಫಿಲ್ಮ್ ವಿಭಾಗದಲ್ಲಿ ದಾಖಲೆ ಬರೆದಿತ್ತು.

ಎಂ. ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರ ಇದೀಗ ಪಾರ್ಟ್ 2 ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ. 2ನೇ ಭಾಗದಲ್ಲೂ ಸುಶಾಂತ್ ಸಿಂಗ್ ರಜಪೂತ್, ಧೋನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮೊದಲ ಭಾಗವನ್ನ ನೀರಜ್ ಪಾಂಡೆ ನಿರ್ದೇಶಿಸಿದ್ದರು. ಆದರೆ ಪಾರ್ಟ್ 2 ಚಿತ್ರವನ್ನ  ಯಾರು ನಿರ್ದೇಶಿಸಲಿದ್ದಾರೆ ಅನ್ನೋದು ಇನ್ನು ಅಂತಿಮವಾಗಿಲ್ಲ. ಮೂಲಗಳ ಪ್ರಕಾರ ನೀರಜ್ ಪಾಂಡೆ ಮತ್ತೆ ಧೋನಿ ಮೂವಿಗೆ ನಿರ್ದೇಶಕರಾಗಲಿದ್ದಾರೆ.

ಎಂ ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಪಾರ್ಟ್ 2 ಚಿತ್ರದಲ್ಲಿ 2015ರ ವಿಶ್ವಕಪ್ ಹೋರಾಟ, ಧೋನಿ ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ರಾಜಿನಾಮೆ ಸಂದರ್ಭ, 2018ರ ಐಪಿಎಲ್ ಪ್ರಶಸ್ತಿ ಗೆಲುವು ಸೇರಿದಂತೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳು ಚಿತ್ರದಲ್ಲಿರಲಿದೆ. ಇದ್ರ ಜೊತೆಗೆ ಪತ್ನಿ ಸಾಕ್ಷಿ ಧೋನಿ, ಪುತ್ರಿ ಝಿವಾ ಧೋನಿ ಕುರಿತು ರೋಚಕ ಮಾಹಿತಿಗಳು ಇರಲಿದೆ.

ಎಂ ಎಸ್ ಧೋನಿ,ಅನ್‌ಟೋಲ್ಡ್ ಸ್ಟೋರಿ ಚಿತ್ರ ಮುಂದಿನ ವರ್ಷದ ಆಗಸ್ಟ್‌ನಲ್ಲಿ ತೆರೆಗೆ ಬರೋ ಸಾಧ್ಯತೆ ಇದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಪಾಲ್ಗೊಳ್ಳುತ್ತಿರುವುದರಿಂದ, ಟೂರ್ನಿ ಬಳಿಕ ಧೋನಿ ಮೂವಿ ಪಾರ್ಟ್ 2 ತೆರೆಗೆ ಬರಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು
ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರಿದ ಆಸೀಸ್‌ ದಿಗ್ಗಜ ಕ್ರಿಕೆಟರ್‌ ಡೇಮಿಯನ್‌ ಮಾರ್ಟಿನ್‌, ಅಪ್‌ಡೇಟ್‌ ನೀಡಿದ ಗಿಲ್‌ಕ್ರಿಸ್ಟ್‌!