ಧೋನಿ ವಿಕೆಟ್ ಕೀಪಿಂಗ್‌ನಲ್ಲಿ ಹೊಸ ದಾಖಲೆ-ಆದರೆ ನಂ.1 ಸ್ಥಾನ ಅಷ್ಟು ಸುಲಭವಲ್ಲ!

First Published Jul 14, 2018, 6:34 PM IST
Highlights

ಪ್ರತಿ ಪಂದ್ಯದಲ್ಲಿ ಒಂದಲ್ಲಾ ಒಂದು ದಾಖಲೆ ನಿರ್ಮಿಸುತ್ತಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂ ಎಸ್ ಧೋನಿ ಇದೀಗ ಲಾರ್ಡ್ಸ್ ಪಂದ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಧೋನಿ ಬರೆದ ದಾಖಲೆ ಏನು?  ಇಲ್ಲಿದೆ.

ಲಂಡನ್(ಜು.14): ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 300ನೇ ಕ್ಯಾಚ್ ಹಿಡಿಯೋ ಮೂಲಕ ಗರಿಷ್ಠ ಕ್ಯಾಚ್ ಹಿಡಿದ ಭಾರತೀಯ ವಿಕೆಟ್ ಕೀಪರ್ ಅನ್ನೋ ದಾಖಲೆ ಬರೆದಿದ್ದಾರೆ.

ಉಮೇಶ್ ಯಾದವ್ ಎಸೆತದಲ್ಲಿ ಜೋಸ್ ಬಟ್ಲರ್ , ಕೀಪರ್ ಧೋನಿಗೆ ಕ್ಯಾಚ್ ನೀಡಿದರು. ಈ ಮೂಲಕ ಧೋನಿ ಏಕದಿನದಲ್ಲಿ 300 ಕ್ಯಾಚ್ ಹಿಡಿದ ಸಾಧನೆ ಮಾಡಿದರು. ಈ ಮೂಲಕ ಧೋನಿ ಗರಿಷ್ಠ ಕ್ಯಾಚ್ ಹಿಡಿದ ವಿಶ್ವದ ನಾಲ್ಕನೇ ವಿಕೆಟ್ ಕೀಪರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಕದಿನದಲ್ಲಿ ಗರಿಷ್ಠ ಕ್ಯಾಚ್ ಹಿಡಿದ ವಿಕೆಟ್ ಕೀಪರ್‌ಗಳ ಪೈಕಿ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಮೊದಲ ಸ್ಥಾನದಲ್ಲಿದ್ದಾರೆ. ಗಿಲ್‌ಕ್ರಿಸ್ಟ್ ಏಕದಿನದಲ್ಲಿ 417 ಕ್ಯಾಚ್ ಹಿಡಿದಿದ್ದಾರೆ. 2ನೇ ಸ್ಥಾನವನ್ನ ಸೌತ್ಆಫ್ರಿಕಾದ ಮಾರ್ಕ್ ಬೌಚರ್ ಅಲಂಕರಿಸಿದ್ದಾರೆ.

ಏಕದಿನದಲ್ಲಿ ಗರಿಷ್ಠ ಕ್ಯಾಚ್ ಹಿಡಿದ ವಿಕೆಟ್ ಕೀಪರ್

ಆಡಮ್ ಗಿಲ್‌ಕ್ರಿಸ್ಟ್  417
ಮಾರ್ಕ್ ಬೌಚರ್ 403
ಕುಮಾರ್ ಸಂಗಕ್ಕಾರ 402
ಎಂ ಎಸ್ ಧೋನಿ 300
ಬ್ರೆಂಡನ್ ಮೆಕ್ಕಲಮ್ 262

 

click me!