2ನೇ ಏಕದಿನ ಪಂದ್ಯಕ್ಕೆ ಟಾಸ್ ಅಗತ್ಯವಿರಲಿಲ್ಲ: ವಿರಾಟ್ ಕೊಹ್ಲಿ

By Suvarna NewsFirst Published Jul 14, 2018, 6:13 PM IST
Highlights

ಕ್ರಿಕೆಟ್ ಪಂದ್ಯದಲ್ಲಿ ಟಾಸ್ ತುಂಬಾ ಮುಖ್ಯ. ಟಾಸ್ ಗೆದ್ದ ತಂಡ ಅರ್ಧ ಮೇಲುಗೈ ಸಾಧಿಸಿದಂತೆ. ಬಾರಿ ಟಾಸ್ ಗೆದ್ದರೆ ಸಾಕು ಪಂದ್ಯ ಗೆದ್ದಂತೆ ಅನ್ನೋ ಮಾತು ಕ್ರಿಕೆಟ್‌ನಲ್ಲಿ ಸಾಮಾನ್ಯ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಟಾಸ್ ಅಗತ್ಯವೇ ಇರಲಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಕೊಹ್ಲಿ ಟಾಸ್ ಬೇಡ ಎಂದಿದ್ದೇಕೆ?
 

ಲಂಡನ್(ಜು.14): ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ನಿರ್ಧಾರಕ್ಕೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಾರ್ಗನ್ ಬ್ಯಾಟಿಂಗ್ ಆಯ್ಕ ಮಾಡಿಕೊಳ್ಳೋ ನಿರ್ಧಾರ ಮೊದಲೇ ಹೇಳಿದ್ದರೆ, ದ್ವಿತೀಯ ಪಂದ್ಯಕ್ಕೆ ಟಾಸ್ ಅಗತ್ಯವೇ ಇರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಟೀಂ ಇಂಡಿಯಾ ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳೋ ನಿರ್ಧಾರ ಮಾಡಲಾಗಿತ್ತು. ಹೀಗಾಗಿ ಲಾರ್ಡ್ಸ್ ಪಂದ್ಯಕ್ಕೆ ಟಾಸ್ ಅಗತ್ಯವಿರಲಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಟಾಸ್ ಬಳಿಕ ಮಾತನಾಡಿದ ನಾಯಕ ಕೊಹ್ಲಿ, ಟೀಂ ಇಂಡಿಯಾ ಚೇಸಿಂಗ್ ಮಾಡೋ ನಿರ್ಧಾರ ಮಾಡಿತ್ತು. ಇದಕ್ಕೆ ತಕ್ಕಂತೆ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ನಿರ್ಧಾರ ಮೊದಲೇ ಗೊತ್ತಿದ್ದರೆ ಟಾಸ್ ಹಾಕೋ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ. 

ಇದನ್ನು ಓದಿ: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ-ಇಂದೇ ಸರಣಿ ಗೆಲುತ್ತಾ ಟೀಂ ಇಂಡಿಯಾ?

click me!