
ಲಂಡನ್(ಜೂ.07): ಇಲ್ಲಿಯವರೆಗಿನ ತಮ್ಮ 13 ವರ್ಷಗಳ ವೃತ್ತಿಜೀವನದಲ್ಲಿ ತಾನೆದುರಿಸಿದ ಅತ್ಯಂತ ಕಠಿಣ ಬೌಲರ್ ಎಂದರೆ ಅದು ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಖ್ತರ್ ಎಂದು ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ತಿಳಿಸಿದ್ದಾರೆ.
‘ವಿಶ್ವದ ಅನೇಕ ವೇಗದ ಬೌಲರ್'ಗಳನ್ನು ಎದುರಿಸಿದ್ದೇನೆ. ಪ್ರತಿಯೊಬ್ಬ ವೇಗಿಗಳು ಒಬ್ಬರಿಗಿಂತ ಒಬ್ಬರು ಭಿನ್ನ. ಅವರನ್ನು ಮುಖಾಮುಖಿಯಾಗಲು ನನ್ನದೆ ತಂತ್ರವನ್ನು ಮಾಡಿಕೊಳ್ಳುತ್ತೇನೆ ಎಂದು ಮಾಹಿ ಹೇಳಿದ್ದಾರೆ.
ವೇಗದ ಬೌಲರ್'ಗಳನ್ನು ಎದುರಿಸುವುದು ಅತ್ಯಂತ ಕಠಿಣ. ಆದಾಗ್ಯೂ ನೀವು ಎದುರಿಸಿದ ಅತ್ಯಂತ ಕಠಿಣ ಬೌಲರ್'ವೊಬ್ಬರನ್ನು ಆಯ್ಕೆ ಮಾಡಿ ಎಂದರೆ, ನನ್ನ ಆಯ್ಕೆ ಶೋಯಬ್ ಅಖ್ತರ್ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಅಖ್ತರ್ ಅತ್ಯಂತ ವೇಗವಾಗಿ ದಾಳಿ ಮಾಡುತ್ತಿದ್ದರು. ಯಾರ್ಕರ್, ಬೌನ್ಸರ್'ಗಳನ್ನು ಎಸೆಯುತ್ತಿದ್ದರು. ಅವರ ವೇಗದ ದಾಳಿಗೆ ಉತ್ತರಿಸುವುದು ಸುಲಭದ ಮಾತಾಗಿರಲಿಲ್ಲ’ ಎಂದು ಧೋನಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.