
ನವದೆಹಲಿ(ಮಾ.24): ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ 2019ರ ಐಸಿಸಿ ಏಕದಿನ ವಿಶ್ವಕಪ್ ನಂತರವೂ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಮುಂದುವರಿಯುವ ಇರಾದೆ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘‘ಎರಡು ವರ್ಷ ಬಹಳ ದೀರ್ಘ ಸಮಯ. ಭಾರತ ತಂಡದ ವೇಳಾಪಟ್ಟಿಯನ್ನು ನೋಡಿದಾಗ ಲಯ ಹಾಗೂ ದೈಹಿಕ ಸಾಮರ್ಥ್ಯ ಉಳಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಸವಾಲು ಅನಿಸುತ್ತದೆ. ಆದರೆ ಸದ್ಯ ಇದೇರೀತಿ ಫಿಟ್'ನೆಸ್ ಕಾಪಾಡಿಕೊಂಡರೆ, 2019ರ ವಿಶ್ವಕಪ್ ಬಳಿಕವೂ ನಾನು ಆಡಲು ಸಮರ್ಥನಿದ್ದೇನೆ ಅನಿಸುತ್ತದೆ’’ ಎಂದಿದ್ದಾರೆ.
ಇತ್ತೀಚೆಗಷ್ಟೆ ಮುಕ್ತಾಯವಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನೆಡಿಸಿದ್ದ ಧೋನಿ, ತಮ್ಮ ತಂಡವನ್ನು ಫೈನಲ್'ವರೆಗೂ ಕೊಂಡ್ಯೊಯ್ದಿದ್ದರು. ಅಲ್ಲದೇ ಚತ್ತೀಸ್'ಘಡ ಭರ್ಜರಿ ಶತಕ ಸಿಡಿಸಿ ತಮ್ಮಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿಯಿದೆ ಎಂದು ಸಾಬೀತು ಪಡಿಸಿದ್ದರು. ಇನ್ನು ಬಿಸಿಸಿಐ ಕೂಡಾ ಮಾಹಿಯನ್ನು ಎ ಗ್ರೇಡ್ ಗುತ್ತಿಗೆ ಸ್ಥಾನಮಾನವನ್ನು ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.