ವಿಶ್ರಾಂತಿಯಲ್ಲಿರುವ ಧೋನಿ ಈಗ ಶೂಟಿಂಗ್‌ನಲ್ಲಿ ಬ್ಯುಸಿ!

Published : Aug 04, 2018, 01:39 PM ISTUpdated : Aug 04, 2018, 01:57 PM IST
ವಿಶ್ರಾಂತಿಯಲ್ಲಿರುವ ಧೋನಿ ಈಗ ಶೂಟಿಂಗ್‌ನಲ್ಲಿ ಬ್ಯುಸಿ!

ಸಾರಾಂಶ

ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿದ್ದ ಎಂ ಎಸ್ ಧೋನಿ ಇದೀಗ ಫುಲ್ ಬ್ಯುಯಾಗಿದ್ದಾರೆ.  ಎಂಡೋರ್ಸ್‌ಮೆಂಟ್, ಜಾಹೀರಾತು ಶೂಟಿಂಗ್ ಸೇರಿದಂತೆ ಹಲವು ಕಾರ್ಯಗಳಲ್ಲಿ ಧೋನಿ ತೊಡಗಿಸಿಕೊಂಡಿದ್ದಾರೆ. ಇದೀಗ ಧೋನಿಯ ಜಾಹೀರಾತು ಶೂಟಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

ರಾಂಚಿ(ಆ.04): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ತವರಿಗೆ ವಾಪಾಸ್ಸಾಗಿರುವ ಎಂ ಎಸ್ ಧೋನಿ, ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಗಷ್ಟೇ ಧೋನಿ ಸೈಕಲ್ ಏರಿ ಸ್ಟಂಟ್ ಪ್ರದರ್ಶಿಸಿದ್ದರು. ಇದೀಗ ಧೋನಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಜಾಹೀರಾತು ಶೂಟಿಂಗ್‌ಗಾಗಿ ಎಂ ಎಸ್ ಧೋನಿ ಡಿಫರೆಂಟ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿಗಾಗಿ ವಿವಿಧ ಪೋಸ್ ನೀಡಿರುವ ಧೋನಿ, ಬಾಲಿವುಡ್ ನಟರನ್ನೇ ನಾಚಿಸುವಂತೆ ನಟಿಸಿದ್ದಾರೆ.

ಧೋನಿಯ ಎಂಡೋರ್ಸ್‌ಮೆಂಟ್, ಜಾಹೀರಾತು ಸೇರಿದಂತೆ ಇತರ ವ್ಯವಹಾರಗಳನ್ನ ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನೋಡಿಕೊಳ್ಳುತ್ತಿದೆ. ಧೋನಿಯ ಆಪ್ತ ಅರುಣ್ ಪಾಂಡೆ ರೀತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಮುಖ್ಯಸ್ಥರಾಗಿದ್ದಾರೆ.

ಇದೀಗ ನೂತನ ಜಾಹೀರಾತಿನಲ್ಲಿ ಎಂ ಎಸ್ ಧೋನಿ ಅಭಿಮಾನಿಗಳನ್ನ ಮಾತ್ರವಲ್ಲ,  ಗ್ರಾಹಕರನ್ನು ಮೋಡಿ ಮಾಡಲು ರೆಡಿಯಾಗಿದ್ದಾರೆ. ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಧೋನಿ ಜಾಹೀರಾತು ಶೂಟಿಂಗ್ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ. ಆದರೆ ಕುರಿತು ಹೆಚ್ಚಿನ ವಿವರಗಳನ್ನ ಮಾತ್ರ ಬಹಿರಂಗ ಪಡಿಸಿಲ್ಲ.

ಇದನ್ನು ಓದಿ: ಸೈಕಲ್‌ನಲ್ಲಿ ರಜನಿಕಾಂತ್ ರೀತಿ ಸ್ಟಂಟ್ ಮಾಡಿದ ಎಂ ಎಸ್ ಧೋನಿ!

ಇದನ್ನು ಓದಿ: ಎಂ ಎಸ್ ಧೋನಿಯ ಹೊಸ ಹೇರ್ ಸ್ಟೈಲ್ ಹೇಗಿದೆ?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?