ಧೋನಿಯನ್ನು ಮೇಕೆ(GOAT) ಎಂದು ಕರೆದ ಪಾಕಿಸ್ತಾನದ ಆಟಗಾರ ?

Published : Sep 15, 2017, 10:17 PM ISTUpdated : Apr 11, 2018, 12:38 PM IST
ಧೋನಿಯನ್ನು ಮೇಕೆ(GOAT) ಎಂದು ಕರೆದ ಪಾಕಿಸ್ತಾನದ ಆಟಗಾರ ?

ಸಾರಾಂಶ

ಎಂ.ಎಸ್​​ ಧೋನಿ ಟೀಂ ಇಂಡಿಯಾದಲ್ಲಿ ಕಾಮದೇನುವಿದ್ದಂತೆ. ಯಾವಾಗ ಏನೇ ಅಗತ್ಯವಿದ್ರೂ ತಂಡ ಮೋರೆ ಹೋಗೋದು ಧೋನಿ ಬಳಿಯೇ. ಟಾರ್ಗೆಟ್​​​ ಫಿನಿಶ್​​ ಮಾಡಬೇಕಾ..? ದೊಡ್ಡ ಮೊತ್ತ ಪೇರಿಸಿಬೇಕಾ..? ವಿಕೆಟ್​​ ಪಡಿಬೇಕಾ..? ವಿಕೆಟ್​​ ಉಳಿಸಿಕೊಳ್ಳಬೇಕಾ..? ಎಲ್ಲದಕ್ಕೂ ಧೋನಿಯೇ ಬೇಕು.

ಟೀಂ ಇಂಡಿಯಾದ ಕಾಮಧೇನು ಎಂ.ಎಸ್​​ ಧೋನಿ. ತಂಡಕ್ಕೆ ಅಗತ್ಯವಿರುವುದೆಲ್ಲವನ್ನ ನೀಡೋ ಮತ್ತು ಸಕಲಕಲಾವಲ್ಲಬನಾಗಿರುವ ಧೋನಿಗೆ ಪಾಕ್​ ಆಟಗಾರನೊಬ್ಬ ಮೇಕೆ ಎಂದು ಕರೆದಿದ್ದಾನೆ. ಮೇಕೆ ಅನ್ನೋ ಮೂಲಕ ಮಹಿ ಫ್ಯಾನ್ಸ್​​ಗೆ ದಂಗು ಬಡಿಸಿದ್ದಾನೆ.

ಎಂ.ಎಸ್​​ ಧೋನಿ ಟೀಂ ಇಂಡಿಯಾದಲ್ಲಿ ಕಾಮದೇನುವಿದ್ದಂತೆ. ಯಾವಾಗ ಏನೇ ಅಗತ್ಯವಿದ್ರೂ ತಂಡ ಮೋರೆ ಹೋಗೋದು ಧೋನಿ ಬಳಿಯೇ. ಟಾರ್ಗೆಟ್​​​ ಫಿನಿಶ್​​ ಮಾಡಬೇಕಾ..? ದೊಡ್ಡ ಮೊತ್ತ ಪೇರಿಸಿಬೇಕಾ..? ವಿಕೆಟ್​​ ಪಡಿಬೇಕಾ..? ವಿಕೆಟ್​​ ಉಳಿಸಿಕೊಳ್ಳಬೇಕಾ..? ಎಲ್ಲದಕ್ಕೂ ಧೋನಿಯೇ ಬೇಕು. ಒಂದು ರೀತಿ ಹೇಳಬೇಕಂದ್ರೆ ಧೋನಿ ಭಾರತದ ದೈವ ಸ್ವರೂಪಿ.

ಟೀಂ ಇಂಡಿಯಾದ ಕಾಮಧೇನು ಅಂತಲೇ ಕರೆಯಿಸಿಕೊಳ್ಳೋ ಧೋನಿಗೆ ಪಾಕ್​  ಆಟಗಾರನಾದ ಶೋಯಿಬ್​ ಮಲಿಕ್​​ ಮೇಕೆ ಎಂದು ಕರೆದಿದ್ದಾರೆ. ಭಾರತದ ಅಳಿಯ ಅಂದರೆ ಸಾನಿಯಾ ಮಿರ್ಜಾ ಪತಿ, ಪಾಕ್​ನ ಆಲ್​ರೌಂಡರ್​​​ ಶೋಯಿಬ್​ ಮಲ್ಲಿಕ್​​ ತಮ್ಮ ಟ್ವಿಟ್ಟರ್​​ ಅಕೌಂಟ್​​​ನಲ್ಲಿ ಧೋನಿಯನ್ನ ಗೋಟ್​​​​ ಅಂದ್ರೆ ಮೇಕೆ ಎಂದು ಕರೆದಿದ್ದಾರೆ.

 ‘GOAT' ಎಂದರೆ ?

ಪಾಕಿಸ್ತಾನದ ಆಲ್​ರೌಂಡರ್​​ ಧೋನಿಯನ್ನ GOAT ಎಂದು ಕರೆದಿರೋದಕ್ಕೆ ಚಿಂತಿಸುವ ಅವಶ್ಯಕತೆ ಇಲ್ಲ. ಕಾರಣ ಮಲ್ಲಿಕ್​ ಪ್ರಕಾರ GOAT ಅಂದ್ರೆ 'ಗ್ರೇಟಸ್ಟ್​​​​ ಆಫ್​​ ಆಲ್​ ಟೈಮ್'​ ಅಂತ. ಮಲ್ಲಿಕ್​ ಇಂಗ್ಲಿಷ್​​​ನಲ್ಲಿ ಧೋನಿಯನ್ನ GOAT ಎಂದು ಕರೆದು ಅದಕ್ಕೆ  ವಿಸ್ತಾರ ರೂಪ ಕೊಟ್ಟು ಹೊಗಳಿದ್ದಾರೆ. ಮೊನ್ನೆ ಶೊಯಿಬ್​ ಮಲ್ಲಿಕ್​​ ತಮ್ಮ ಅಭಿಮಾನಿಗಳೊಂದಿಗೆ ಟ್ವಿಟ್ಟರ್​ನಲ್ಲಿ ಚ್ಯಾಟ್​​ ಮಾಡುತ್ತಿರುವಾಗ ಒಬ್ಬ ಅಭಿಮಾನಿ ಧೋನಿ ಬಗ್ಗೆ ಕೇಳಿದ ಪ್ರಶ್ನೆಗೆ ಮಲ್ಲಿಕ್​ ಧೋನಿಯನ್ನ ಈ ರೀತಿ ಹೊಗಳಿದ್ರು.

ಒಟ್ಟಿನಲ್ಲಿ ಸದ್ಯ ಧೋನಿ ಬಗ್ಗೆ ಮಲ್ಲಿಕ್​ ನೀಡಿರುವ ಹೇಳಿಕೆ ಫುಲ್​​ ವೈರಲ್​ ಆಗಿದ್ದು ಅವರ ಈ ಹೇಳಿಕೆಗೆ ಭಾರತದ ಕೋಟ್ಯಾಂತರ ಧೋನಿ ಅಭಿಮಾನಿಗಳು ಫುಲ್​ ಖುಷ್​​​ ಆಗಿದ್ದಾರೆ. ತಮ್ಮ ಆರಾಧ್ಯ ದೈವನ ಬಗ್ಗೆ ಬದ್ಧ ವೈರಿ ಪಾಕಿಸ್ತಾನ ಕೂಡ ಮೆಚ್ಚುಗೆಯ ಮಾತುಗಳನ್ನಾಡಿರೋದು ಹೆಮ್ಮೆ ಅನಿಸಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದ ಹೊರಬಿದ್ದ ವೈಭವ್ ಸೂರ್ಯವಂಶಿ; ಕಾರಣ ತುಂಬಾ ಇಂಟ್ರೆಸ್ಟಿಂಗ್!
ವಿಜಯ್ ಹಜಾರೆ ಟ್ರೋಫಿ: ಎರಡನೇ ಪಂದ್ಯದಲ್ಲೂ ಅಬ್ಬರಿಸಿದ ಕೊಹ್ಲಿ! ಗುಜರಾತ್ ಎದುರು ವಿರಾಟ್ ಗಳಿಸಿದ ಸ್ಕೋರ್ ಎಷ್ಟು?