
ರಾಂಚಿ(ಜೂನ್.2): ಟೀಮ್ಇಂಡಿಯಾದ ಕಟ್ಟಾ ಅಭಿಮಾನಿ ಸುಧೀರ್ ಕುಮಾರ್ ಗೌತಮ್ ಪ್ರತಿ ಪಂದ್ಯದಲ್ಲೂ ಭಾರತೀಯ ಕ್ರಿಕೆಟ್ ತಂಡವನ್ನ ಹುರಿದುಂಬಿಸುತ್ತಾರೆ. ತ್ರಿವರ್ಣ ಧ್ವಜದ ಬಣ್ಣವನ್ನ ದೇಹಕ್ಕೆ ಬಳಿದು, ಒಂದು ಕೈಯಲ್ಲಿ ಶಂಖ, ಮತ್ತೊಂದು ಕೈಯಲ್ಲಿ ಭಾರತದ ಭಾವುಟ ಹಿಡಿದು ತಂಡಕ್ಕೆ ಸಪೋರ್ಟ್ ಮಾಡುವ ಸುಧೀರ್ ಎಲ್ಲಿರಿಗೂ ಚಿರಪರಿಚಿತ. ಇದೀಗ ಸುಧೀರ್ ಕುಮಾರ್ ಗೌತಮ್‌ಗೆ ಎಮ್ ಎಸ್ ಧೋನಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ರಾಂಚಿಯಲ್ಲಿರುವ ಧೋನಿ ಮನೆಯಲ್ಲಿ ಸುಧೀರ್ ಕುಮಾರ್ ಗೌತಮ್‌ಗೆ ಭರ್ಜರಿ ಔತಣ ಕೂಟ ಆಯೋಜಿಸಿದ್ದರು.
ಇತ್ತೀಚೆಗಷ್ಟೇ ಎಮ್ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ಟ್ರೋಫಿ ವಶಪಡಿಸಸಿಕೊಂಡು ಇತಿಹಾಸ ರಚಿಸಿತ್ತು. ಇದೀಗ ಕ್ರಿಕೆಟ್ ಅಭಿಮಾನಿ ಸುಧೀರ್ ಕುಮಾರ್ ಗೌತಮ್‌ಗೆ ಔತಣ ಕೂಟ ಆಯೋಜಿಸಿ ಅಭಿಮಾನಿಯನ್ನ ಗೌರವಿಸಿದ್ದಾರೆ. ಎಮ್ ಎಸ್ ಧೋನಿ, ಪತ್ನಿ ಸಾಕ್ಷಿ ಧೋನಿ, ಮಗಳು ಝಿವಾ ಹಾಗೂ ಧೋನಿ ಪೋಷಕರ ಜೊತೆಗೆ ಭೋಜನ ಸವಿದ ಸುಧೀರ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.