ಟೆಸ್ಟ್ ರ‍್ಯಾಂಕಿಂಗ್ ಅಳೆಯಲು ಐಸಿಸಿಯಿಂದ ಹೊಸ ನೀತಿ

First Published Jun 2, 2018, 2:31 PM IST
Highlights

ತಂಡಗಳ ಟೆಸ್ಟ್ ರ‍್ಯಾಂಕಿಂಗ್ ಅಳೆಯಲು ಐಸಿಸಿ ಹೊಸ ನೀತಿ ತರಲು ಮುಂದಾಗಿದೆ. ಸದ್ಯ ಹೊಸ ನೀತಿ ಜಾರಿಯಾದರೆ ಸದ್ಯ ನಂಬರ್.1 ಸ್ಥಾನದಲ್ಲಿರುವ ಟೀಮ್ಇಂಡಿಯಾ 2ನೇ ಸ್ಥಾನಕ್ಕೆ ಕುಸಿಯಲಿದೆ. 
 

ಮುಂಬೈ(ಜೂನ್.2): ಟೆಸ್ಟ್ ತಂಡಗಳ ರ‍್ಯಾಂಕಿಂಗ್ ಅಳೆಯಲು ಐಸಿಸಿ ಹೊಸ ನೀತಿ  ತರಲು ನಿರ್ಧರಿಸಿದೆ. ಸದ್ಯ ಟೆಸ್ಟ್ ಸರಣಿಗಳ ಬಳಿಕ ತಂಡದ ರ‍್ಯಾಂಕಿಂಗ್ ಅಳೆಯಲಾಗುತ್ತೆ. ಇನ್ಮುಂದೆ ಪ್ರತಿ ಪಂದ್ಯದ ಬಳಿಕ ಟೆಸ್ಟ್ ರ‍್ಯಾಂಕಿಂಗ್ ಬದಲಾಗಲಿದೆ. 2019ರಲ್ಲಿ ಹೊಸ ನೀತಿ ಜಾರಿಯಾಗಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. 

ಮುಂಬೈನಲ್ಲಿ ಸಭೆ ಸೇರಿದ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಟೆಕ್ನಿಕಲ್ ಕಮಿಟಿ ಹೊಸ ನೀತಿಯನ್ನ ಶಿಫಾರಸ್ಸು ಮಾಡಿದೆ. ಸದ್ಯದ ನೀತಿ ಪ್ರಕಾರ ಪ್ರತಿ ಸರಣಿ ಬಳಿಕ ಗೆಲುವು-ಸೋಲಿನ ಪ್ರಕಾರ ತಂಡಗಳಿಗೆ ಅಂಕಗಳನ್ನ ನೀಡಲಾಗುತ್ತೆ. ಆದರಲ್ಲೂ ಪ್ರವಾಸಿ ತಂಡವಾಗಿ ಗೆಲುವು ಸಾಧಿಸಿದರೆ ಹೆಚ್ಚಿನ ಅಂಕ ನೀಡಲಾಗುತ್ತಿತ್ತು. ಇದೀಗ ನೂತನ ನೀತಿ ಪ್ರಕಾರ ಪ್ರತಿ ಪಂದ್ಯದ ಬಳಿಕ ತಂಡಗಳಿಗೆ ಪಾಯಿಂಟ್ಸ್ ನೀಡಲಾಗುತ್ತೆ. ಇದರ ಆಧಾರದಲ್ಲಿ ಟೆಸ್ಟ್ ರ‍್ಯಾಂಕಿಂಗ್ ನಿರ್ಧರಿಸಲಾಗುವುದು ಎಂದು ಐಸಿಸಿ ಟೆಕ್ನಿಕಲ್ ಕಮಿಟಿ ಹೇಳಿದೆ.

ಕಳೆದೆರಡು ವರ್ಷದಲ್ಲಿ ಗರಿಷ್ಠ ಟೆಸ್ಟ್ ಪಂದ್ಯಗಳನ್ನ ಗೆದ್ದ ಟೀಮ್ಇಂಡಿಯಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ತಕ್ಷಣವೇ ನೂತನ ನೀತಿ ಜಾರಿಯಾದರೆ ಭಾರತದ ನಂಬರ್.1 ಸ್ಥಾನ ಕೈತಪ್ಪಲಿದೆ. ಕಾರಣ ಪ್ರತಿ ಪಂದ್ಯದ ಪ್ರದರ್ಶನ ಹಾಗೂ ಗೆಲುವಿನ ಆಧಾರದಲ್ಲಿ ಸೌತ್ಆಫ್ರಿಕಾ ತಂಡ ಮೊದಲ ಸ್ಥಾನ ಪಡೆಯಲಿದೆ.

ನೂತನ ಟೆಸ್ಟ್ ರ‍್ಯಾಂಕಿಂಗ್ ನೀತಿ ಪ್ರಕಾರ ರ‍್ಯಾಂಕಿಂಗ್:

ರ‍್ಯಾಂಕ್ ತಂಡ ಅಂಕ
1 ಸೌತ್ಆಫ್ರಿಕಾ 555.5
2 ಭಾರತ 497.2
3 ನ್ಯೂಜಿಲೆಂಡ್ 405.6
4 ಶ್ರೀಲಂಕಾ 338.9
5 ಆಸ್ಟ್ರೇಲಿಯಾ 328.3

 

click me!