2019ರ ಲೋಕಸಭಾ ಎಲೆಕ್ಷನ್‌ಗೆ ಧೋನಿ-ಗಂಭೀರ್ ಬಿಜೆಪಿಯಿಂದ ಸ್ಪರ್ಧೆ!

By Web DeskFirst Published Oct 22, 2018, 4:42 PM IST
Highlights

2019ರ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ದತೆ ಆರಂಭಿಸಿದೆ.ಇದರ ಬೆನ್ನಲ್ಲೇ  ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಡ್ಯಾಶಿಂಗ್ ಒಪನರ್ ಗೌತಮ್ ಗಂಭೀರ್‌ ಬಿಜೆಪಿಯಿಂದ ರಾಜಕೀಯಕ್ಕೆ ಎಂಟ್ರಿಕೊಡಲಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಇಲ್ಲಿದೆ ಈ ಕುರಿತು ವಿವರ.

ನವದೆಹಲಿ(ಅ.22): ಟೀಂ ಇಂಡಿಯಾ ಕ್ರಿಕೆಟಿಗರು ರಾಜಕೀಯ ಧುಮಕಿ ಅದೃಷ್ಟ ಪರೀಕ್ಷೆ ನಡೆಸಿರುವುದು ಇದೇ ಮೊದಲಲ್ಲ. ಆದರೆ ಇದೀಗ ಇಬ್ಬರು ದಿಗ್ಗಜ ಕ್ರಿಕೆಟಿಗರು ಹೆಸರು ಮುಂಬರುವ ಲೋಕಸಭಾ ಚುನಾವಣಾ ಅಖಾಡದಲ್ಲಿ ಕೇಳಿಬರುತ್ತಿದೆ. 

ಟೀಂ ಇಂಡಿಯಾ ಯಶಸ್ವಿ ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಗೌತಮ್ ಗಂಭೀರ್ ಹೆಸರು ಇದೀಗ ಲೋಕಸಭಾ ಚುನಾವಣಾ ಕಣದಲ್ಲಿ ಕೇಳಿಬಂದಿದೆ. ಗೌತಮ್ ಗಂಭೀರ್ ಹೆಸರು ಈಗಾಗಲೇ  ಬಿಜೆಪಿ ಪಕ್ಷದ ಜೊತೆ ಥಳುಕು ಹಾಕಿತ್ತು. ಆದರೆ ಇದೇ ಮೊದಲ ಬಾರಿಗೆ ಎಂ.ಎಸ್ ಧೋನಿ ಹೆಸರು ಸೇರಿಕೊಂಡಿದೆ.

201199ರ ಲೋಕಸಭಾ ಚುನಾವಣೆಯಲ್ಲಿ ಧೋನಿ ಹಾಗೂ ಗಂಭೀರ್ ಇಬ್ಬರೂ ತಮ್ಮ ತಮ್ಮ ಹುಟ್ಟೂರಿನಲ್ಲಿ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಸಂಡೇ ಗಾರ್ಡಿಯನ್ ವರದಿ ಪ್ರಕಾರ, ಧೋನಿ ಹಾಗೂ ಗಂಭೀರ್ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.

ದೆಹಲಿಯ ಎಂಪಿ ಮೀನಾಕ್ಷಿ ಲೇಖಿ ಬದಲು ಈ ಬಾರಿ ಗೌತಮ್ ಗಂಭೀರ್ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಇತ್ತ ಜಾರ್ಖಂಡ್‌ನಿಂದ ಧೋನಿಯನ್ನ ಕಣಕ್ಕಿಳಿಸಲು ಕೇಸರಿ ಪಡೆ ನಿರ್ಧರಿಸಿದೆ ಎಂದ ವರದಿ ಪ್ರಕಟಿಸಿದೆ. ಇಷ್ಟೇ ಅಲ್ಲ 2019ರಲ್ಲಿ ಧೋನಿ ಹಾಗೂ ಗಂಭೀರ್ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳಲು ಬಿಜೆಪಿ ಲೆಕ್ಕಾಚಾರ ಹಾಕಿದೆ.

click me!