ಯುವ ಕ್ರಿಕೆಟಿಗರೊಂದಿಗೆ ಹುಕ್ಕಾ ಸೇದುತ್ತಾರಂತೆ ಧೋನಿ..!

Published : Sep 29, 2018, 11:24 AM IST
ಯುವ ಕ್ರಿಕೆಟಿಗರೊಂದಿಗೆ ಹುಕ್ಕಾ ಸೇದುತ್ತಾರಂತೆ ಧೋನಿ..!

ಸಾರಾಂಶ

ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿರುವ ಎಂ.ಎಸ್‌.ಧೋನಿ, ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿದ್ದಾರೆ. ಹಲವರ ಪಾಲಿಗೆ ‘ಗಾಡ್‌ ಫಾದರ್‌’ ಎನಿಸಿರುವ ಧೋನಿ, ಯುವ ಕ್ರಿಕೆಟಿಗರೊಂದಿಗೆ ಬಾಂಧವ್ಯ ವೃದ್ಧಿಗೆ ಅನುಸರಿಸುವ ಮಾದರಿಯನ್ನು ವಿಶೇಷ ಸಂದರ್ಶನದಲ್ಲಿ ಬೈಲಿ ಬಿಚ್ಚಿಟ್ಟಿದ್ದಾರೆ. 

ನವದೆಹಲಿ[ಸೆ.29]: ‘ಎಂ.ಎಸ್‌.ಧೋನಿ ತಂಡದ ಒಗ್ಗಟ್ಟಿಗಾಗಿ ವಿಶೇಷ ಯೋಜನೆ ಕಂಡುಕೊಂಡಿದ್ದಾರೆ. ಹೋಟೆಲ್‌ ರೂಂನಲ್ಲಿ ಹುಕ್ಕಾ ಸೇದುತ್ತಾ ಯುವಕರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ’, ಹೀಗೆಂದು ಹೇಳಿರುವುದು ಆಸ್ಪ್ರೇಲಿಯಾದ ಮಾಜಿ ನಾಯಕ, ಧೋನಿ ಜತೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡಿದ ಜಾರ್ಜ್ ಬೈಲಿ.

ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿರುವ ಎಂ.ಎಸ್‌.ಧೋನಿ, ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿದ್ದಾರೆ. ಹಲವರ ಪಾಲಿಗೆ ‘ಗಾಡ್‌ ಫಾದರ್‌’ ಎನಿಸಿರುವ ಧೋನಿ, ಯುವ ಕ್ರಿಕೆಟಿಗರೊಂದಿಗೆ ಬಾಂಧವ್ಯ ವೃದ್ಧಿಗೆ ಅನುಸರಿಸುವ ಮಾದರಿಯನ್ನು ವಿಶೇಷ ಸಂದರ್ಶನದಲ್ಲಿ ಬೈಲಿ ಬಿಚ್ಚಿಟ್ಟಿದ್ದಾರೆ. 

‘ಧೋನಿಗೆ ಹುಕ್ಕಾ ಸೇದುವುದು ಎಂದರೆ ಇಷ್ಟ. ಅವರ ಕೊಠಡಿಯಲ್ಲಿ ಸದಾ ತಡರಾತ್ರಿ ವರೆಗೂ ಹಲವು ಯುವ ಕ್ರಿಕೆಟಿಗರನ್ನು ಕಾಣಬಹುದು. ಹುಕ್ಕಾದೊಂದಿಗೆ ಆಟದ ಕುರಿತು ಅನೇಕ ಮಾಹಿತಿಗಳನ್ನು ಧೋನಿ ಹಂಚಿಕೊಳ್ಳುತ್ತಾರೆ. ಅವರ ಕೊಠಡಿಗೆ ಯಾರು ಯಾವಾಗ ಬೇಕಿದ್ದರೂ ಹೋಗಬಹುದು. ಎಲ್ಲರೊಂದಿಗೂ ಅವರು ಬೆರೆಯುತ್ತಾರೆ. ಈ ರೀತಿ ಮಾಡುವುದರಿಂದ ಮೈದಾನದಲ್ಲೂ ಒಗ್ಗಟ್ಟು ಹೆಚ್ಚುತ್ತದೆ’ ಎಂದು ಬೈಲಿ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?