ಆಸೀಸ್‌ ಟೆಸ್ಟ್‌ ತಂಡಕ್ಕೆ ಇಬ್ಬರು ಉಪನಾಯಕರು

By Web DeskFirst Published Sep 28, 2018, 12:01 PM IST
Highlights

ದಕ್ಷಿಣ ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವು ವಿದೇಶಿ ಪ್ರವಾಸ ಕೈಗೊಳ್ಳುತ್ತಿದೆ. ಇದೇ ಅಕ್ಟೋಬರ್ 7ರಿಂದ ಯುಎಇನಲ್ಲಿ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಟಿಮ್ ಪೈನ್ ಮುನ್ನಡೆಸಲಿದ್ದು ಅವರಿಗೆ ಸಹಾಯಕವಾಗಿ ಮಾರ್ಶ್ ಹಾಗೂ ಹ್ಯಾಜಲ್’ವುಡ್ ಕಾರ್ಯನಿರ್ವಹಿಸಲಿದ್ದಾರೆ. 

ಸಿಡ್ನಿ(ಸೆ.28): ಕ್ರಿಕೆಟ್‌ ಆಸ್ಪ್ರೇಲಿಯಾ, ಇದೇ ಮೊದಲ ಬಾರಿಗೆ ತನ್ನ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಇಬ್ಬರು ಉಪನಾಯಕರನ್ನು ನೇಮಿಸಿದೆ. ಆಲ್ರೌಂಡರ್‌ ಮಿಚೆಲ್‌ ಮಾರ್ಶ್ ಮತ್ತು ವೇಗಿ ಜೋಶ್‌ ಹ್ಯಾಜಲ್‌ವುಡ್‌ಗೆ ಉಪನಾಯಕ ಪಟ್ಟನೀಡಲಾಗಿದೆ. 

ಈ ಇಬ್ಬರೂ ನಾಯಕ ಟಿಮ್‌ ಪೈನ್‌ ಜತೆ ಕಾರ್ಯನಿರ್ವಹಿಸಲಿದ್ದಾರೆ. ತಂಡಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ, ತಂಡದ ಸದಸ್ಯರು ಮತ್ತು ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌, ಆಯ್ಕೆಗಾರ ಟ್ರೆವರ್‌ ಹಾನ್ಸ್‌ರನ್ನು ಒಳಗೊಂಡ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ. ‘ಉಪನಾಯಕತ್ವದ ಹೊಸ ಮಾದರಿಯಿಂದ, ನಾಯಕನಿಗೆ ಅತ್ಯುತ್ತಮ ಬೆಂಬಲ ದೊರೆಯಲಿದೆ. ಈಗಾಗಲೇ ಬೇರೆ ಕ್ರೀಡೆಗಳಲ್ಲಿ ಇದು ಯಶಸ್ವಿ ಮಾದರಿ’ ಎಂದು ಹಾನ್ಸ್‌ ಹೇಳಿದ್ದಾರೆ.

click me!