
ಸೆಂಚುರಿಯನ್(ಫೆ.22): ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್ ಧೋನಿ ಮೈದಾನದಲ್ಲಿ ಸಿಟ್ಟಾಗುವುದು ತೀರಾ ಅಪರೂಪ. ದಶಕಗಳ ಕಾಲ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ವಿರುದ್ಧ ಸಿಡಿಮಿಡಿಗೊಂಡಿದ್ದರು. ಆ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಅಷ್ಟಕ್ಕೂ ಆಗಿದ್ದೇನು:
ಮನೀಶ್ ಪಾಂಡೆ 20ನೇ ಓವರ್'ನ ಮೊದಲ ಎಸೆತದಲ್ಲಿ ಮಿಡ್'ವಿಕೆಟ್'ನತ್ತ ಚೆಂಡನ್ನು ಬಾರಿಸಿ ಕೇವಲ ಒಂದು ರನ್ ಗಳಿಸಿದರು. ಧೋನಿ ಆ ಎಸೆತದಲ್ಲಿ 2 ರನ್ ಓಡಲು ಸಿದ್ದರಿದ್ದರು. ಆದರೆ ಚೆಂಡಿನತ್ತ ಸರಿಯಾಗಿ ಗಮನ ಹರಿಸದ ಪಾಂಡೆ ಕೇವಲ ಒಂದು ರನ್'ಗೆ ತೃಪ್ತಿಪಟ್ಟುಕೊಂಡರು. ಆಗ ಮನೀಶ್'ರನ್ನು ಕಂಡು ಕೋಪಗೊಂಡ ಧೋನಿ, ‘ಅಲ್ಲಿ ಇಲ್ಲಿ ನೋಡಬೇಡ. ಈ ಕಡೆ ಗಮನ ಇರಲಿ’ ಎಂದು ಬೈದಿದ್ದಾರೆ ಎನ್ನಲಾಗಿದೆ.
ಧೋನಿ-ಪಾಂಡೆ ಜೋಡಿ 5ನೇ ವಿಕೆಟ್'ಗೆ ಮುರಿಯದ 98 ರನ್' ಕಲೆಹಾಕಿತಾದರೂ, ಆಫ್ರಿಕಾ ಪರ ಕ್ಲಾಸೆನ್ ಹಾಗೂ ಜೆಪಿ ಡುಮಿನಿ ಆಕರ್ಷಕ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಸುಲಭವಾಗಿ ಜಯದ ನಗೆ ಬೀರಿತು. ಇದೀಗ 3 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದು, ಕೊನೆಯ ಹಾಗೂ ನಿರ್ಣಾಯಕ ಪಂದ್ಯವು ಫೆ.24ರಂದು ಕೇಪ್'ಟೌನ್'ನಲ್ಲಿ ಜರುಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.