ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಒಟ್ಟು 20 ರೇಸ್‌ಗಳು ನಡೆಯಲಿದ್ದು, ಭಾರತದಲ್ಲಿ ನಡೆಯಲಿರುವುದು ಈ ವರ್ಷದ 13ನೇ ರೇಸ್ ಆಗಿದೆ. ಶುಕ್ರವಾರ ಅಭ್ಯಾಸ ನಡೆಯಲಿದ್ದು, ಶನಿವಾರ ಅರ್ಹತಾ ಸುತ್ತು ನಡೆಯಲಿದೆ. ಮುಖ್ಯ ರೇಸ್ ಭಾನುವಾರ ಮಧ್ಯಾಹ್ನ 3.30ರಿಂದ ಸಂಜೆ 4.20ರ ವರೆಗೂ ನಿಗದಿಯಾಗಿದೆ.
ಗ್ರೇಟರ್ ನೋಯ್ಡಾ(ಸೆ.22): 2011ರಿಂದ 2013ರ ವರೆಗೂ ಭಾರತದಲ್ಲಿ ಫಾರ್ಮುಲಾ 1 ಕಾರ್ ರೇಸ್ ನಡೆದಿತ್ತು ಎನ್ನುವುದು ಹಲವರಿಗೆ ನೆನಪಿರಬಹುದು. ಕಾರುಗಳಿಗೆ ಎಫ್1 ಹೇಗೋ, ಅದೇ ರೀತಿ ಬೈಕ್‌ಗಳಿಗೆ ಮೋಟೋ ಜಿಪಿ. ಅತ್ಯುತ್ಕೃಷ್ಟ ಗುಣಮಟ್ಟದ ಬೈಕ್ ರೇಸಿಂಗ್ ಮೋಟೋ ಜಿಪಿಗೆ ಚೊಚ್ಚಲ ಬಾರಿಗೆ ಭಾರತ ಆತಿಥ್ಯ ವಹಿಸಲು ಸಜ್ಜಾಗಿದ್ದು, ಇಲ್ಲಿನ ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಶುಕ್ರವಾರದಿಂದ ಮೋಟೋ ಜಿಪಿ ಭಾರತ್ ರೇಸ್ ಆರಂಭಗೊಳ್ಳಲಿದೆ.
ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಒಟ್ಟು 20 ರೇಸ್‌ಗಳು ನಡೆಯಲಿದ್ದು, ಭಾರತದಲ್ಲಿ ನಡೆಯಲಿರುವುದು ಈ ವರ್ಷದ 13ನೇ ರೇಸ್ ಆಗಿದೆ. ಶುಕ್ರವಾರ ಅಭ್ಯಾಸ ನಡೆಯಲಿದ್ದು, ಶನಿವಾರ ಅರ್ಹತಾ ಸುತ್ತು ನಡೆಯಲಿದೆ. ಮುಖ್ಯ ರೇಸ್ ಭಾನುವಾರ ಮಧ್ಯಾಹ್ನ 3.30ರಿಂದ ಸಂಜೆ 4.20ರ ವರೆಗೂ ನಿಗದಿಯಾಗಿದೆ.
Dil Jashn Bole: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಧಿಕೃತ ಗೀತೆ ರಿಲೀಸ್, ರಣವೀರ್ ಶೈನಿಂಗ್
ಮೋಟೋ ಜಿಪಿ, ಮೋಟೋ 3, ಮೋಟೋ 2 ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 41 ತಂಡಗಳ ಒಟ್ಟು 82 ಚಾಲಕರು ಸ್ಪರ್ಧಿಸಲಿದ್ದಾರೆ. ಹೋಂಡಾ, ಯಮಾಹಾ, ಡುಕಾಟಿ ಹೀಗೆ ಜಗತ್ಪ್ರಸಿದ್ಧಿ ಪಡೆದಿರುವ ಆಟೋಮೊಬೈಲ್ ಸಂಸ್ಥೆಗಳು ತಂಡಗಳನ್ನು ಹೊಂದಿವೆ.
ಹೇಗಿರಲಿವೆ ಬೈಕ್‌ಗಳು?: ಮೋಟೋ ಜಿಪಿ ವಿಭಾಗದಲ್ಲಿ 1000 ಸಿಸಿ ಎಂಜಿನ್‌ನ ಬೈಕ್‌ಗಳು ಸ್ಪರ್ಧಿಸಲಿವೆ. ಇದರಲ್ಲಿ 11 ತಂಡಗಳ 22 ರೈಡರ್‌ಗಳು ಇರಲಿದ್ದಾರೆ. ಈ ಬೈಕ್‌ಗಳು ಸರಾಸರಿ 300 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಚಲಿಸಬಲ್ಲವು.
ಇನ್ನು ಮೋಟೋ 3 ವಿಭಾಗದ ಬೈಕ್‌ಗಳು 765 ಸಿಸಿ ಎಂಜಿನ್‌ಗಳನ್ನು ಒಳಗೊಂಡಿರಲಿದ್ದು, ಈ ವಿಭಾಗದಲ್ಲಿ 14 ತಂಡಗಳ 30 ರೈಡರ್‌ಗಳು ಭಾಗವಹಿಸಲಿದ್ದಾರೆ. ಈ ಬೈಕ್‌ಗಳು ಸರಾಸರಿ 250 ಕಿ.ಮೀ.ಗಿಂತ ಹೆಚ್ಚು ವೇಗವಾಗಿ ಚಲಿಸಲಿವೆ. ಮೋಟೋ 2 ವಿಭಾಗದ ಬೈಕ್‌ಗಳು 250 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದರಲ್ಲಿ 16 ತಂಡಗಳ 30 ಚಾಲಕರು ಸ್ಪರ್ಧಿಸಲಿದ್ದಾರೆ. ಈ ಬೈಕ್‌ಗಳು 200-220 ಕಿ.ಮೀ. ವೇಗ ದಾಟಬಲ್ಲವು.
ಕುಸ್ತಿ ವಿಶ್ವ ಚಾಂಪಿಯನ್‌ಶಿಪ್: ಭಾರತೀಯರಿಗೆ ನಿರಾಸೆ!
1 ಗಂಟೆಯಲ್ಲಿ 100 ಕಿ.ಮೀ.!: ಬುದ್ಧ ಸರ್ಕ್ಯೂಟ್ 4.96 ಕಿ.ಮೀ. ಉದ್ದವಿದ್ದು, ಮೋಟೋ ಜಿಪಿ ವಿಭಾಗದ ಬೈಕ್‌ಗಳು ಒಟ್ಟು 24 ಲ್ಯಾಪ್ (ಸುತ್ತು) ಸಂಚರಿಸಲಿವೆ. ಅಂದರೆ ಅಂದಾಜು 50 ನಿಮಿಷಗಳಲ್ಲಿ 118.97 ಕಿ.ಮೀ. ದೂರವನ್ನು ರೈಡರ್‌ಗಳು ಪೂರ್ತಿಗೊಳಿಸಲಿದ್ದಾರೆ.
ನನ್ನ ಖಾತೆಯಲ್ಲಿ ಕೇವಲ 80000 ಇದೆ: ನಗಾಲ್!
ನವದೆಹಲಿ: ಭಾರತದ ನಂ.1 ಟೆನಿಸ್ ಆಟಗಾರ ಸುಮಿತ್ ನಗಾಲ್ ತಾವು ಅರ್ಥಿಕ ಸಂಕಷ್ಟದಲ್ಲಿರುವುದಾಗಿ ಅಳಲು ತೋಡಿಕೊಂಡಿದ್ದು, ತಮ್ಮ ಬ್ಯಾಂಕ್ ಖಾತೆಯಲ್ಲಿ ಕೇವಲ 900 ಯುರೋಸ್(ಅಂದಾಜು 80000 ರು.) ಹಣವಿದೆ ಎಂಬ ಹೇಳಿಕೊಂಡಿದ್ದಾರೆ. ಎಟಿಪಿ ಟೂರ್ನಿಗಳಲ್ಲಿ ಆಡುತ್ತಾ ತಾವು ಗಳಿಸುತ್ತಿರುವ ಹಣ ತಮ್ಮ ಅಭ್ಯಾಸ, ಫಿಸಿಯೋ ಹಾಗೂ ಕೋಚ್‌ಗಳ ಸಂಭಾವನೆ, ಪ್ರಯಾಣ, ವಾಸ್ತವ್ಯಕ್ಕೆ ಸಾಕಾಗುತ್ತಿದ್ದು, ಜೀವನ ನಡೆಸುವುದು ಕಷ್ಟವಾಗಿದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ವೃತ್ತಿಪರ ಕ್ರೀಡೆಯಿಂದ ಹಿಂದೆ ಸರಿಯಬೇಕು ಎನಿಸುತ್ತಿದೆ ಎಂದಿರುವ ನಗಾಲ್, ತಮಗೆ ಪ್ರಾಯೋಜಕತ್ವ ನೀಡುವಂತೆ ಖಾಸಗಿ ಸಂಸ್ಥೆಗಳು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.