ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ನ್ಯೂಜಿಲೆಂಡ್ ಆಟಗಾರ್ತಿ ವಿಶಿಷ್ಠ ರೀತಿಯಲ್ಲಿ ಔಟ್!

By Web DeskFirst Published Mar 2, 2019, 11:53 AM IST
Highlights

ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಸ್ಮರಣೀಯ ಘಟನೆಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿರುತ್ತೆ. ಇದೀಗ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮಹಿಳಾ ಅಭ್ಯಾಸ ಪಂದ್ಯದಲ್ಲಿನ ಘಟನೆ ಭಾರಿ ವೈರಲ್ ಆಗಿದೆ. ಇಲ್ಲಿದೆ ನೋಡಿ.
 

ಸಿಡ್ನಿ(ಮಾ.02): ಕ್ರಿಕೆಟ್‌ನಲ್ಲಿನ ಕೆಲ ಘಟನೆಗಳು ಇತಿಹಾಸ ಪುಟ ಸೇರುತ್ತವೆ.  ಸ್ಟ್ರೈಕ್ ಬ್ಯಾಟ್ಸ್‌ಮನ್, ನಾನ್ ಸ್ಟ್ರೈಕ್‌ನಲ್ಲಿದ್ದ ಸಹ ಬ್ಯಾಟ್ಸ್‌ಮನ್‌ನಿಂದ ಔಟಾಗುತ್ತಿರುವುದು ಮೊದಲೇನಲ್ಲ. ಆದರೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಅಭ್ಯಾಸ ಪಂದ್ಯದಲ್ಲಿನ ಔಟ್ ಇದೀಗ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕಾಗಿ ಪ್ರಾರ್ಥಿಸಿದ ಮಾಜಿ ಕ್ರಿಕೆಟಿಗ!

ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಗರ್ವನರ್ ಜನರಲ್ಸ್ XI ಹಾಗೂ ನ್ಯೂಜಿಲೆಂಡ್ ತಂಡ ಮುಖಾಮುಖಿಯಾಗಿತ್ತು. ಈ ವೇಳೆ ಆಸಿಸ್ ಬೌಲರ್ ಹೀದರ್ ಗ್ರಹಾಂ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಕಿವೀಸ್ ಆಟಗಾರ್ತಿ ಕೇಟಿ ಪರ್ಕಿನ್ಸ್ ನೇರವಾಗಿ ಶಾಟ್ ಹೊಡೆದರು. ಆದರೆ ಗಾಳಿಯಲ್ಲಿದ್ದ ಚೆಂಡು ನಾನ್ ಸ್ಟ್ರೈಕ್‌ನಲ್ಲಿದ್ದ ಮಾರ್ಟಿನ್ ಬ್ಯಾಟ್‌ಗೆ ತಾಗಿ ಮೇಲಕ್ಕೆ ಚಿಮ್ಮಿತು.  ಇದನ್ನ ಆಸಿಸ್ ಬೌಲರ್ ಹೀದರ್ ಕ್ಯಾಚ್ ಹಿಡಿದರು.

 

Oh WOW! Katey Martin helps Heather Graham pick up one of the most bizarre dismissals you'll ever see in the Governor General's XI match! 😱 pic.twitter.com/fSV3GJkjyA

— Australian Women's Cricket Team 🏏 (@SouthernStars)

 

ಇದನ್ನೂ ಓದಿ: ಸುಪ್ರೀಂ ತೀರ್ಪಿನ ಮೇಲೆ ಶ್ರೀಶಾಂತ್ ಭವಿಷ್ಯ- BCCIಗೆ ಶುರುವಾಯ್ತು ಆತಂಕ!

ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದ ಫೀಲ್ಡ್ ಅಂಪೈರ್‌ಗಳು ಕೊನೆಗೆ ಔಟ್ ಎಂದು  ತೀರ್ಪು ನೀಡಿದರು. ಸ್ಟ್ರೈಕ್ ಆಟಾಗಾರ ಹೊಡೆದ ಶಾಟ್ ನಾನ್ ಸ್ಟ್ರೈಕ್ ಆಟಗಾರನ ಬ್ಯಾಟ್‌ಗೆ ತಾಗಿ ಕ್ಯಾಚ್ ಹಿಡಿದ ಘಟನೆ ಇದೇ ಮೊದಲು.   

click me!