
ಸಿಡ್ನಿ(ಜೂ.30): ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ನಡುವಿನ ವೇತನ ಬಿಕ್ಕಟ್ಟು ಅಂತಿಮ ಹಂತ ತಲುಪಿದ್ದು, ನಿರೀಕ್ಷೆಯಂತೆ ಆಟಗಾರರು ಒಪ್ಪಂದಕ್ಕೆ ಸಹಿ ಹಾಕದಿರುವ ಕಾರಣ ಅವರ ಸ್ಥಿತಿ ಬಹುತೇಕ ಅತಂತ್ರವೆಂಬಂತಾಗಿದೆ. ಈ ಮೂಲಕ ಟೆಸ್ಟ್ ತಂಡದ ಆಟಗಾರರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಆಟಗಾರರು ನಿರುದ್ಯೋಗಿಗಳಾಗಿದ್ದಾರೆ.
ಕಳೆದೆರೆಡು ದಶಕಗಳಿಂದ ಇದ್ದ ಹಣಕಾಸು ಹಂಚಿಕೆ ಮಾದರಿ ಪ್ರಕಾರ ಆಟಗಾರರಿಗೆ ಶೇ.25ರಷ್ಟು ಆದಾಯವನ್ನು ಕ್ರಿಕೆಟ್ ಮಂಡಳಿ ಮೀಸಲಿಡುತ್ತಿತ್ತು. ಆದರೆ ಈ ಹಣವನ್ನು ಇನ್ನೂ ಸಮರ್ಪಕವಾಗಿ ಬಳಸುವ ಉದ್ದೇಶದಿಂದಾಗಿ ಕ್ರಿಕೆಟ್ ಮಂಡಳಿ ಚಾಲ್ತಿಯಲ್ಲಿದ್ದ ಮಾದರಿಯನ್ನು ಮೊಟಕುಗೊಳಿಸಿ ನೂತನ ಮಾದರಿಯಂತೆ ಹೆಚ್ಚುವರಿ ಆದಾಯವನ್ನು ಕೇವಲ ಅಂತಾರಾಷ್ಟ್ರೀಯ ಆಟಗಾರರಿಗೆ ಹಂಚುವುದಾಗಿ ಪ್ರಸ್ತಾಪವಿಟ್ಟಿತ್ತು. ಇದನ್ನು ವಿರೋಧಿಸಿದ ಆಟಗಾರರ ಸಂಘ, ಎಲ್ಲಾ ಹಂತದ ಆಟಗಾರರಿಗೂ ಹಣ ಹಂಚಿಕೆಯಾಗಬೇಕೆಂದು ಪಟ್ಟು ಹಿಡಿದಿದೆ.
ಜುಲೈ 1ರಿಂದ ಆಟಗಾರರು ನಿರುದ್ಯೋಗಿಗಳಾಗಿದ್ದು, ಬಿಕ್ಕಿಟ್ಟಿನಿಂದಾಗಿ ಮುಂಬರುವ ಬಾಂಗ್ಲಾದೇಶ ಹಾಗೂ ಭಾರತ ಪ್ರವಾಸಗಳ ಮೇಲೂ ಪರಿಣಾಮ ಬೀರಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಆ್ಯಷಸ್ ಸರಣಿಗೂ ತೊಂದರೆಯಾಗುವ ಆತಂಕ ಎದುರಾಗಿದೆ.
ಆಟಗಾರರು ಒಪ್ಪಂದಕ್ಕೆ ಸಹಿ ಹಾಕುವವರೆಗೂ ಆದಾಯವನ್ನು ಕೆಳ ಹಂತದ ಕ್ರಿಕೆಟ್ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.