
ಚೆನ್ನೈ(ಜೂ.30): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತದ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಭಾರತ ಎ ಹಾಗೂ ಅಂಡರ್ 19 ತಂಡಗಳ ಕೋಚ್ ಆಗಿ ಮುಂದಿನ 2 ವರ್ಷಗಳ ಕಾಲ ಮುಂದುವರಿಸಿದೆ. ಅಲ್ಲದೆ ದ್ರಾವಿಡ್ ಅವರು ಐಪಿಎಲ್'ನ ಡೆಲ್ಲಿ ಡೇರ್'ಡೇವಿಲ್ ತಂಡದ ಮೆಂಟರ್ ಸ್ಥಾನದಿಂದ ನಿರ್ಗಮಿಸಿದ್ದಾರೆ.
ರಾಹುಲ್ ಅವರು 2015ರಲ್ಲಿ ಭಾರತ ಎ ತಂಡದ ಕೋಚ್ ಆಗಿ ಸಾರಥ್ಯ ವಹಿಸಿಕೊಂಡಿದ್ದರು. ಅವರು ತಂಡ ಮುನ್ನಡೆಸಿದ ಪರಿಣಾಮ ಕಿರಿಯ ಆಟಗಾರರು ದೇಸಿ ಹಾಗೂ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಕೋಚ್ ಆದ ನಂತರ ಭಾರತ ಎ ತಂಡ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಡುವೆ ನಡೆದ ತ್ರಿಕೋನ ಸರಣಿಯನ್ನು ಜಯಿಸಿತ್ತು. ಅಲ್ಲದೆ 2016ರಲ್ಲಿ ವಿಶ್ವಕಪ್'ನಲ್ಲಿ ರನ್ನರ್ ಅಫ್ ಸ್ಥಾನ ಪಡೆದಿತ್ತು.
ಬಿಸಿಸಿಐ ಉಸ್ತುವಾರಿ ಅಧ್ಯಕ್ಷ ಸಿಕೆ ಖನ್ನಾ ಹಾಗೂ ಉಸ್ತುವಾರಿ ಕಾರ್ಯದರ್ಶಿ ಅಮಿತಾಭ್ ಚೌಧರಿ' ದ್ರಾವಿಡ್ ಅವರ ನೇತೃತ್ವದಲ್ಲಿ ಭಾರತ ಕಿರಿಯರ ತಂಡ ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಯಶಸ್ಸು ಸಾಧಿಸಲಿದೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.