ಆಸ್ಟ್ರೇಲಿಯಾ ಪರ 13 ವರ್ಷ ಆಡಿದರು ಆಗಿಲ್ಲ, ಪೋರ್ಚುಗಲ್ ಪರ ಮೊದಲ ಶತಕ ಸಿಡಿಸಿದ RCB ಮಾಜಿ ಆಟಗಾರ

Published : Aug 23, 2026, 12:39 PM IST
Moises Henriques

ಸಾರಾಂಶ

ಆಸ್ಟ್ರೇಲಿಯಾದ ಆಲ್‌ರೌಂಡರ್ ಮೊಯ್ಸಸ್ ಹೆನ್ರಿಕ್ಸ್, ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಪೋರ್ಚುಗಲ್ ಪರ ಸಿಡಿಸಿದ್ದಾರೆ. ಜೆಕ್ ಗಣರಾಜ್ಯದ ವಿರುದ್ಧ ನಡೆದ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ 111 ರನ್ ಗಳಿಸುವ ಮೂಲಕ, ತಮ್ಮ ಪೋರ್ಚುಗೀಸ್ ಮೂಲದ ತಂಡಕ್ಕೆ ನಾಯಕರಾಗಿ ಐತಿಹಾಸಿಕ ಗೆಲುವು ತಂದುಕೊಟ್ಟರು.

ಆಸ್ಟ್ರೇಲಿಯಾ ಆಲ್‌ರೌಂಡರ್ ಮೊಯ್ಸಸ್ ಹೆನ್ರಿಕ್ಸ್ ತಮ್ಮ ಮೊದಲ ಅಂತರಾಷ್ಟ್ರೀಯ ಶತಕವನ್ನು ಸಿಡಿಸಿದ್ದಾರೆ. ಆದರೆ ಅವರ ಮೊದಲ ಶತಕ ದಾಖಲಾಗಿದ್ದು ಆಸ್ಟ್ರೇಲಿಯಾ ಪರ ಅಲ್ಲ, ಪೋರ್ಚುಗಲ್ ಪರ ಬಂದಿದೆ ಅನ್ನೋದು ಇಲ್ಲಿ ವಿಶೇಷ ಸಂಗತಿಯಾಗಿದೆ. ಪೋರ್ಚುಗಲ್ ಪ್ರಸ್ತುತ ಐಸಿಸಿ ಪುರುಷರ ಟಿ20 ವಿಶ್ವಕಪ್ ಸಬ್ ರಿಜಿನಲ್ ಯುರೋಪ್‌ ಕ್ವಾಲಿಫೈಯರ್ ಸಿ ಮ್ಯಾಚ್ ಆಡುತ್ತಿದ್ದು, ಗುರುವಾರ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯ ತಂಡವನ್ನು ಎದುರಿಸಿತ್ತು.

ಆಸೀಸ್ ಅಲ್ಲ, ಪೋರ್ಚುಗಲ್‌ಗೆ ಹೆನ್ರಿಕ್ಸ್ ಶತಕದ ಅಬ್ಬರ!

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೋರ್ಚುಗಲ್ ನಿಗದಿತ 20 ಓವರ್‌ಗಳಲ್ಲಿ 211 ರನ್ ಗಳಿಸಿತು. ಮೊಯ್ಸಸ್ ಹೆನ್ರಿಕ್ಸ್ ಒಬ್ಬರೇ ಪಂದ್ಯದಲ್ಲಿ 111 ರನ್ ಗಳಿಸಿದ್ದರು. ಉಳಿದ ಬ್ಯಾಟರ್ ಗಳು ಒಟ್ಟಾರೆ 100 ರನ್ ಗಳಿಸಿದ್ದರು. ಮೊಯ್ಸಸ್ ಹೆನ್ರಿಕ್ಸ್ 48 ಎಸೆತಗಳಲ್ಲಿ ಶತಕ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಪೋರ್ಚುಗಲ್ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ವೇಗದ ಶತಕ ಇದಾಗಿದೆ.

ಜೆಕ್ ಗಣರಾಜ್ಯದ ವಿರುದ್ಧ ಪಂದ್ಯದಲ್ಲಿ ಮೊಯ್ಸಸ್ ಹೆನ್ರಿಕ್ಸ್ 51 ಎಸೆತಗಳಲ್ಲಿ 111 ರನ್ ಗಳಿಸಿದ್ದು, ಇದರಲ್ಲಿ 12 ಬೌಂಡರಿ, 7 ಸಿಕ್ಸರ್‌ಗಳು ದಾಖಲಾಗಿತ್ತು. ಇದರೊಂದಿಗೆ ಬೌಂಡರಿ ಮತ್ತು ಸಿಕ್ಸರ್ ಗಳಿಂದಲೇ 90 ರನ್ ಹರಿದು ಬಂದಿತ್ತು. ಜಸ್ಟ್ 48 ಎಸೆತಗಳಲ್ಲಿ 100 ರನ್ ಗಡಿದಾಟ್ಟಿದ್ದ ಮೊಯ್ಸಸ್ ಹೆನ್ರಿಕ್ಸ್, ಪೋರ್ಚುಗಲ್ ಪರ ದಾಖಲೆ ಬರೆದಿದ್ದಾರೆ. 111 ರನ್‌ಗಳೊಂದಿಗೆ ಪೋರ್ಚುಗಲ್ ಪರ ಆಟಗಾರರೋರ್ವ ಸಿಡಿಸಿದ ಎರಡನೇ ಅತ್ಯಧಿಕ ಸ್ಕೋರ್ ಕೂಡ ಇದಾಗಿದೆ.

ಪೋರ್ಚುಗಲ್ ತಂಡ ಮುನ್ನಡೆಸುತ್ತಿರುವ ಹೆನ್ರಿಕ್ಸ್

ಪೋರ್ಚುಗಲ್ ಪರ ಟಿ20 ಮಾದರಿಯಲ್ಲಿ ವೇಗದ ಶತಕ ಬಾರಿಸದ ದಾಖಲೆ ಕ್ರಿಸ್ಟೋಫರ್ ಡಿ ಫ್ರೀಟಾಸ್ ಅವರ ಹೆಸರಿನಲ್ಲಿದೆ. ನಾರ್ವೆ ವಿರುದ್ಧ 43 ಎಸೆತಗಳಲ್ಲಿ ಫ್ರೀಟಾಸ್ ಅವರು ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ನಾರ್ವೆ ವಿರುದ್ಧದ ಪಂದ್ಯದಲ್ಲಿ ಫೀಟಾಸ್ 125 ರನ್ ಗಳಿಸಿ, ಅತ್ಯಾಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಪೋರ್ಚುಗಲ್ ಪರ ದಾಖಲಿಸಿದ್ದರು.

ಮೊನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪೋರ್ಚುಗಲ್ 211 ರನ್ ಗಳಿಸಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಜೆಕ್ ಗಣರಾಜ್ಯ 8.5 ಓವರ್ ಗಳನ್ನು ಆಡಿದ ಸಂದರ್ಭದಲ್ಲಿ ಪಂದ್ಯದಕ್ಕೆ ಮಳೆ ಅಡ್ಡಿಪಡಿಸಿತ್ತು. ಈ ಹಂತದಲ್ಲಿ ಜೆಕ್ ಗಣರಾಜ್ಯ ಕೇವಲ 24 ರನ್ ಗಳಿಸಿ, 5 ವಿಕೆಟ್ ಕಳೆದುಕೊಂಡಿತ್ತು. ಇದರೊಂದಿಗೆ ಡಕ್ವರ್ಥ್ ಲೂಯಿಸ್ ವಿಧಾನದ ಮೂಲಕ ಪಂದ್ಯದಲ್ಲಿ ಪೋರ್ಚುಗಲ್ 91 ರನ್‌ಗಳ ಗೆಲುವು ಪಡೆದುಕೊಂಡಿತ್ತು.

ಪೋರ್ಚುಗಲ್‌ ಮೂಲ, ಆಸೀಸ್ ಪರ ಕ್ರಿಕೆಟ್‌

ಮೊಯ್ಸಸ್ ಹೆನ್ರಿಕ್ಸ್ ಪೋರ್ಚುಗಲ್ ಮೂಲದ ಆಸ್ಟ್ರೇಲಿಯನ್ ಕ್ರಿಕೆಟಿಗರಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸೀಸ್ ಪರ ಆಡಿದ್ದರು. ಆದರೆ ಈಗ ಪೋರ್ಚುಗಲ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಆಲ್‌ರೌಂಡರ್ ಮೊಯ್ಸಸ್ ಹೆನ್ರಿಕ್ಸ್ ಪ್ರಥಮ ದರ್ಜೆ, ಲಿಸ್ಟ್ ಎ, ಲಿಸ್ಟ್ ಬಿ ಮತ್ತು ಟಿ20 ಪಂದ್ಯಗಳು ಸೇರಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಇನ್ನು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ 4 ಟೆಸ್ಟ್, 16 ಏಕದಿನ ಪಂದ್ಯ ಹಾಗೂ 24 ಟಿ20 ಪಂದ್ಯಗಳನ್ನು ಆಡಿದ್ದಾರೆ. 2013ರಲ್ಲಿ ಭಾರತದ ಪರ ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 68, ಎರಡನೇ ಇನ್ನಿಂಗ್ಸ್‌ನಲ್ಲಿ 81 ರನ್ ಗಳಿಸಿ ಮಿಂಚಿದ್ದರು. ಐಪಿಎಲ್‌ನಲ್ಲಿ ಆರ್‌ಸಿಬಿ, ಮುಂಬೈ, ಹೈದರಾಬಾದ್ ತಂಡದಗಳ ಪರ ಆಡಿದ್ದು, 2016ರಲ್ಲಿ ಎಸ್‌ಆರ್‌ಎಚ್‌ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಲೊಂಬೊ ಟೆಸ್ಟ್: ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು, WTC ಫೈನಲ್ ಆಸೆಯೂ ಜೀವಂತ
Cricket: 149 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲೇ ಮಹಾ ದಾಖಲೆ: ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರು ವೇಗಿಗಳು ಇವರೇ!