
ಕೋಲ್ಕತ್ತಾ(ಮಾ.13): ಭಾರತದ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಕಿರುಕುಳ, ಹಲ್ಲೆ, ಮ್ಯಾಚ್ ಫಿಕ್ಸಿಂಗ್,ಕೊಲೆ ಯತ್ನ, ಅನೇಕ ಮಹಿಳೆಯರ ಜೊತೆ ಸಂಬಂಧ ಸೇರಿದಂತೆ ಹಲವು ದೂರುಗಳನ್ನು ನೀಡಿರುವ ಪತ್ನಿ ಹಸೀನ್ ಜಹಾನ್ ಇಂದು ಪತ್ರಕರ್ತರ ವಿರುದ್ಧ ತಾಳ್ಮೆ ಕಳೆದುಕೊಂಡು ಕೂಗಾಡಿದ್ದಲ್ಲದೆ ಕ್ಯಾಮರಾವನ್ನು ಚಚ್ಚಿ ಹಾಕಿದ್ದಾಳೆ.
ಮಾಧ್ಯಮದ ವರದಿಯಂತೆ ಸೇ. ಸಬಾಸ್ಟಿಯನ್ ಶಾಲೆಯ ಬಳಿ ಅಕ್ಷರಶಹಃ ಮಾಧ್ಯಮದ ವಿರುದ್ಧ ಕಿರುಚಾಡಿದಳು. ಒಂದು ಮಾಧ್ಯಮದ ಕ್ಯಾಮರಾವನ್ನು ಹಾನಿಗೊಳಿಸಿದ್ದಾಳೆ. ನಂತರ ಆತುರಾತುರವಾಗಿ ಕಾರನ್ನತ್ತಿ ಕಾರನ್ನತ್ತಿ ಹೊರಟು ಹೋಗಿದ್ದಾಳೆ.
ಆದರೆ ಆಕೆಯ ವಕೀಲರು ಹೇಳುವ ಪ್ರಕಾರ ಮಾಧ್ಯಮದ ಪ್ರತಿನಿಧಿಯೊಬ್ಬ ಅನುಚಿತವಾಗಿ ವರ್ತಿಸಿ ವೈಯುಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿದ ಕಾರಣ ಕೋಪಗೊಂಡರು ಎಂದು ತಿಳಿಸಿದ್ದಾರೆ. ಮೊಹಮದ್ ಶಮಿ ಪಾಕಿಸ್ತಾನದ ಮಹಿಳೆಯೊಂದಿಗೆ ಹಣ ಪಡೆದು ಮ್ಯಾಚ್ ಫಿಕ್ಸಿಂಗ್'ನಲ್ಲಿ ಭಾಗಿಯಾಗಿದ್ದಾನೆ' ಎಂದು ದೂರಿದ್ದಳು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಮಿ, ಮಾನಸಿಕ ಅಸ್ವಸ್ಥತೆಯಿಂದ ಈ ರೀತಿ ವರ್ತಿಸಿದ್ದಾಳೆ' ಎಂದಿದ್ದರು.
ಅಲ್ಲದೆ ತಾವು ಹಸೀನಾ ಕುಟುಂಬವನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದು ಆದರೆ ಅವರ್ಯಾರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ತಮ್ಮ ವಿರುದ್ಧ ಪಿತೂರಿಗೆ ಆಕೆಯ ಹಿಂದೆ ಒಂದು ದೊಡ್ಡ ಸಮೂಹವೇ ಇದೆ. ಇಷ್ಟು ದಿನಗಳನ್ನು ಬಿಟ್ಟು ಈಗೇಕೆ ದೂರು ನೀಡುತ್ತಿದ್ದಾರೆ' ಎಂದು ಪ್ರಶ್ನಿಸಿರುವ ಅವರು, ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಾರೆ' ಎಂದು ತಿಳಿಸಿದ್ದಾರೆ.
ಶಮಿ ವಿರುದ್ಧ 307, 323,376, 506 ಸೆಕ್ಷನ್ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಮಾರ್ಚ್ 9ರಂದು ಎಫ್'ಐಆರ್ ದಾಖಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.