
ನವದೆಹಲಿ(ಮಾ.12): ಭಾರತ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಅವರ ಪತ್ನಿ ಹಸೀನ್ ಜಹಾನ್ ದಿನಕ್ಕೊಂದು ಆರೋಪ ಮಾಡುತ್ತಿದ್ದು, ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಒಂದು ವೇಳೆ ಬಚ್ಚಿಟ್ಟಿದ್ದ ಮೊಬೈಲ್ ಸಿಗದಿದ್ದರೆ ಈ ಹೊತ್ತಿಗೆ ನನಗೆ ವಿವಾಹ ವಿಚ್ಛೇದನ ನೀಡುತ್ತಿದ್ದರು ಎಂದು ಹೇಳಿದ್ದಾರೆ.
‘ತಪ್ಪನ್ನು ಒಪ್ಪಿಕೊಳ್ಳುವಂತೆ ಅವರ ಮನಪರಿವರ್ತಿಸಲು ದೀರ್ಘ ಸಮಯದಿಂದ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೆ. ಒಂದೊಮ್ಮೆ ಬಚ್ಚಿಟ್ಟಿದ್ದ ಮೊಬೈಲ್ ನನಗೆ ಸಿಗದಿದ್ದರೆ ಇಷ್ಟರಲ್ಲಾಗಲೇ ಉತ್ತರಪ್ರದೇಶಕ್ಕೆ ಪರಾರಿಯಾಗುತ್ತಿದ್ದರು.ನನಗೂ ವಿವಾಹ ವಿಚ್ಛೇದನ ನೀಡುತ್ತಿದ್ದರು’ ಎಂದು ಜಹಾನ್ ಹೇಳಿದ್ದಾರೆ.
ಮಾತುಕತೆಗೆ ಸಿದ್ಧವೆಂದ ಶಮಿ: ಪತ್ನಿ ಆರೋಪಗಳಿಂದ ಬೇಸತ್ತಿರುವ ಶಮಿ, ‘ಹೊಂದಾಣಿಕೆ ಮಾಡಿಕೊಂಡರೆ ನಮಗೂ, ಮಗಳಿಗೆ ಒಳ್ಳೆಯದು. ಜಹಾನ್ ಬಯಸಿದರೆ ನಾನೇ ಕೋಲ್ಕತಾಗೆ ಹೋಗಿ ಮಾತನಾಡುವೇ’ ಎಂದಿದ್ದಾರೆ. ಇದೇ ವೇಳೆ ತಾವು ಯಾವುದೇ ತನಿಖೆಗೆ ಸಿದ್ಧರಿರುವುದಾಗಿ ಟೀಂ ಇಂಡಿಯಾ ವೇಗಿ ಶಮಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.