
ಕೋಲ್ಕತ(ಮಾ.10): ‘ಶಮಿ ಪಾಕಿಸ್ತಾನಿ ಯುವತಿ ಅಲಿಶ್ಬಾ ಎಂಬುವಳಿಂದ ಹಣ ಪಡೆದಿದ್ದಾರೆ. ಅವರು ಮ್ಯಾಚ್ ಫಿಕ್ಸಿಂಗ್'ನಲ್ಲಿ ತೊಡಗಿರಬಹುದು. ಆಕೆಯಿಂದ ಏಕೆ ಹಣ ಪಡೆದಿದ್ದೇನೆ ಎಂದು ಶಮಿ ನನಗೆ ಯಾವತ್ತೂ ಹೇಳಿಲ್ಲ. ಆತ ನನಗೆ ಮೋಸ ಮಾಡಬಹುದು ಎಂದಾದಲ್ಲಿ, ದೇಶಕ್ಕೆ ಮೋಸ ಮಾಡಿದ್ದರೂ ಯಾವುದೇ ಆಶ್ಚರ್ಯವಿಲ್ಲ’ ಎಂದು ಜಹಾನ್ ಗುರುವಾರ ದೂರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಶಮಿ, ‘ಒಂದೊಮ್ಮೆ ಬೇಕಾದರೆ ಸಾಯುತ್ತೇನೆಯೇ ಹೊರತು ದೇಶ ದ್ರೋಹ ಎಸಗುವ ಕೃತ್ಯ ಎಂದಿಗೂ ಮಾಡುವುದಿಲ್ಲ’ ಎಂದಿದ್ದಾರೆ. ‘ಹಸೀನ್ ಹಾಗೂ ಆಕೆಯ ಕುಟುಂಬಸ್ಥರು ಒಟ್ಟಿಗೆ ಕುಳಿತು ಮಾತನಾಡೋಣ.ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದಿದ್ದಾರೆ. ಯಾರು ಆಕೆಯ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ.
ಶಮಿ ಹಾಗೂ ಹಸೀನಾ ಜಹಾನ್ ನಡುವಿನ ಕೌಟುಂಬಿಕ ಕಲಹ ತಾರಕಕ್ಕೇರಿದ್ದು, ಜಹಾನ್ ಶಮಿ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಒಟ್ಟಾರೆ ಯಾವುದು ನಿಜ ಯಾವುದು ಸುಳ್ಳು ಎನ್ನುವುದು ತನಿಖೆಯ ಬಳಿಕವಷ್ಟೇ ಹೊರಬೀಳಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.