
ನವದೆಹಲಿ[ಜು.13]: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಫೀಲ್ಡರ್, ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮೊಹಮ್ಮದ್ ಕೈಫ್ ಎಲ್ಲಾ ಮಾದರಿಯ ಸ್ಫರ್ಧಾತ್ಮಕ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಸರಿ ಸುಮಾರು 12 ವರ್ಷಗಳ ಹಿಂದೆ ಭಾರತ ಪರ ಕಣಕ್ಕಿಳಿದಿದ್ದ ಕೈಫ್ ಟೀಂ ಇಂಡಿಯಾ ಪಾಲಿಗೆ ಇಂಗ್ಲೆಂಡ್ ವಿರುದ್ಧ 16 ವರ್ಷಗಳ ಹಿಂದೆ ಹೀರೋ ಆಗಿದ್ದ ಐತಿಹಾಸಿಕ ದಿನದಂದೆ ಕೈಫ್ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ.
37 ವರ್ಷದ ಕೈಫ್ ಭಾರತ ಪರ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲೂ 2002ರಲ್ಲಿ ಇಂಗ್ಲೆಂಡ್’ನ ಲಾರ್ಡ್ಸ್ ಮೈದಾನದಲ್ಲಿ ನಾಟ್’ವೆಸ್ಟ್ ಸರಣಿ ಫೈನಲ್ ಪಂದ್ಯದಲ್ಲಿ ಕೈಫ್ ಅಜೇಯ 87 ರನ್ ಬಾರಿಸುವುದರೊಂದಿಗೆ ಭಾರತ ತಂಡಕ್ಕೆ ಸ್ಮರಣೀಯ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಕೈಫ್ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ, ಹಾಗೂ ಕಾರ್ಯದರ್ಶಿ ಅಮಿತಾಬ್ ಚೌಧರಿ ಅವರಿಗೆ ಇ-ಮೇಲ್ ಮೂಲಕ ನಿವೃತ್ತಿ ಸಲ್ಲಿಸಿದ್ದಾರೆ.
ಭಾರತ ತಂಡದ ಕ್ಯಾಪ್ ಧರಿಸಿದ್ದು ನನ್ನ ಪಾಲಿನ ಅವಿಸ್ಮರಣೀಯ ದಿನ. 125 ಏಕದಿನ ಹಾಗೂ 13 ಟೆಸ್ಟ್ ಪಂದ್ಯಗಳಲ್ಲಿ ಸಾಕಷ್ಟು ಅದ್ಭುತ ಕ್ಷಣಗಳನ್ನು ಸವಿದಿದ್ದೇನೆ ಎಂದು ಕೈಫ್ ಹೇಳಿದ್ದಾರೆ. 2000ರಲ್ಲಿ ಭಾರತಕ್ಕೆ ಚೊಚ್ಚಲ ಅಂಡರ್-19 ವಿಶ್ವಕಪ್ ಗೆದ್ದುಕೊಟ್ಟ ಮೊಹಮ್ಮದ್ ಕೈಫ್ 2003ರ ಏಕದಿನ ವಿಶ್ವಕಪ್’ನಲ್ಲಿ ಭಾರತ ತಂಡದ ಸದಸ್ಯರಾಗಿದ್ದರು.
ಕೈಫ್ ಹಾಗೂ ಯುವರಾಜ್ ಸಿಂಗ್ 2002ರ ಬಳಿಕ ವರ್ಷಗಳ ಕಾಲ ಟೀಂ ಇಂಡಿಯಾದ ಯಶಸ್ವಿ ಫೀಲ್ಡರ್’ಗಳಾಗಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ಲವೇ..?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.