ಧೋನಿ ಯುಗಾಂತ್ಯವಲ್ಲ, ಪುಣೆ ಯುಗಾಂತ್ಯ..!: ಪುಣೆ ಫ್ರಾಂಚೈಸಿ ವಿರುದ್ಧ ಕ್ರಿಕೆಟೡೞ ಟೀಕಾಸ್ತ್ರ

By Suvarna Web DeskFirst Published Feb 22, 2017, 4:29 AM IST
Highlights

ಧೋನಿಯನ್ನ ಪುಣೆ ಕ್ಯಾಪ್ಟನ್ಸಿಯಿಂದ ಕಿತ್ತು ಹಾಕಿದ್ದನ್ನು ಮಾಜಿ ಕ್ರಿಕೆಟರ್ಸ್ ಟೀಕಿಸಿದ್ದಾರೆ. ಪುಣೆ ಫ್ರಾಂಚೈಸಿ ವಿರುದ್ಧ ಟೀಕಾಸ್ತ್ರ ಬಿಟ್ಟಿದ್ದಾರೆ. ಪುಣೆ ತಂಡ ತನ್ನ ಹಳ್ಳವನ್ನ ತಾನೇ ತೋಡಿಕೊಂಡಿತು ಅಂತ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಟೀಂ ಇಂಡಿಯಾ ಪರ ಆರ್ಭಟಿಸುತ್ತಿರುವ ಮಹಿ ಇನ್ಮುಂದೆ ಐಪಿಎಲ್​'ನಲ್ಲೂ ಅಬ್ಬರಿಸಲಿದ್ದಾರೆ.

ಧೋನಿಯನ್ನ ಪುಣೆ ಕ್ಯಾಪ್ಟನ್ಸಿಯಿಂದ ಕಿತ್ತು ಹಾಕಿದ್ದನ್ನು ಮಾಜಿ ಕ್ರಿಕೆಟರ್ಸ್ ಟೀಕಿಸಿದ್ದಾರೆ. ಪುಣೆ ಫ್ರಾಂಚೈಸಿ ವಿರುದ್ಧ ಟೀಕಾಸ್ತ್ರ ಬಿಟ್ಟಿದ್ದಾರೆ. ಪುಣೆ ತಂಡ ತನ್ನ ಹಳ್ಳವನ್ನ ತಾನೇ ತೋಡಿಕೊಂಡಿತು ಅಂತ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಟೀಂ ಇಂಡಿಯಾ ಪರ ಆರ್ಭಟಿಸುತ್ತಿರುವ ಮಹಿ ಇನ್ಮುಂದೆ ಐಪಿಎಲ್​'ನಲ್ಲೂ ಅಬ್ಬರಿಸಲಿದ್ದಾರೆ.

ತನ್ನ ಹಳ್ಳ ತಾನೇ ತೋಡಿಕೊಂಡ ಪುಣೆ ಫ್ರಾಂಚೈಸಿ

ಐಪಿಎಲ್​​​​'ನ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕ ಸ್ಥಾನದಿಂದ ಎಂಎಸ್ ಧೋನಿಯನ್ನು ಕಿತ್ತು ಹಾಕಲಾಗಿದೆ ಎಂಬ ಸುದ್ದಿಯನ್ನು ಒಬ್ಬ ಕ್ರಿಕೆಟ್ ಪ್ರೇಮಿಯಾದವನು ನಂಬಲು ಸಾಧ್ಯನಾ? ಖಂಡಿತ ಸಾಧ್ಯವಿಲ್ಲ. ಆದರೂ ನಂಬಲೇಬೇಕು. ಯಾಕೆಂದರೆ ಪುಣೆ ಫ್ರಾಂಚೈಸಿ ತಮ್ಮ ದಡ್ಡತನದಿಂದ ಮಹಿಯನ್ನು ಕ್ಯಾಪ್ಟನ್ಸಿಯಿಂದ ತೆಗೆದುಹಾಕಿದ್ದಾರೆ. ಆದರೆ ಇದು ಒಂದು ರೀತಿ ಇದು ಧೋನಿಗೆ ವರದಾನವಾಗಿದೆ.

ಕ್ಯಾಪ್ಟನ್ಸಿಯಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ: ಧೋನಿ ಸಾಧಿಸಬೇಕಿರುವುದು ಏನೂ ಇಲ್ಲ

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನಲ್ಲಿ ಇನ್ನು ಸಾಧಿಸಬೇಕಿರುವುದು ಏನು ಇಲ್ಲ. 10 ವರ್ಷದಲ್ಲಿ ಸಾಧಿಸಿಬೇಕಿರುವುದನ್ನು ಸಾಧಿಸಿ ತಾನೇನು ಎನ್ನುವುದನ್ನು ವಿಶ್ವ ಕ್ರಿಕೆಟ್​'ಗೆ ತೋರಿಸಿದ್ದಾರೆ. ಭಾರತಕ್ಕೆ ಟಿ20, ಏಕದಿನ ವಿಶ್ವಕಪ್​, ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟಿದ್ದಾರೆ. ಮೂರು ಮಾದರಿಯಲ್ಲೂ ಐಸಿಸಿ ಱಂಕಿಂಗ್​ನಲ್ಲಿ ಟೀಂ ಇಂಡಿಯಾವನ್ನ ನಂಬರ್ ವನ್ ಸ್ಥಾನಕ್ಕೇರಿಸಿದ್ದಾರೆ. ದೇಶ ವಿದೇಶದಲ್ಲಿ ವಿಜಯದ ಪತಾಕಿ ಹಾರಿಸಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿ, ಟೀಂ ಇಂಡಿಯಾ ನಾಯಕನ ಸ್ಥಾನವೇ ಬೇಡವೆಂದು ಬಿಟ್ಟವನಿಗೆ ಪುಣೆ ಟೀಮ್ ಕ್ಯಾಪ್ಟನ್ಸಿ ಯಾವ ಲೆಕ್ಕ?

ಧೋನಿ ಮುಖಭಂಗವಲ್ಲ ಪುಣೆ ಫ್ರಾಂಚೈಸಿ ಮುಖಭಂಗ: ಪುಣೆ ಫ್ರಾಂಚೈಸಿ ವಿರುದ್ಧ ಕ್ರಿಕೆಟರ್ಸ್ ಟೀಕಾಸ್ತ್ರ

ಮಹಿಯನ್ನು ನಾಯಕತ್ವದಿಂದ ಕಿತ್ತಾಗಿ ಏನೇ ಸಾಧಿಸಿದ್ದೇನೆ ಅಂತ ಫುಣೆ ಫ್ರಾಂಚೈಸಿ ಅಂದುಕೊಂಡ್ರೆ ಅದು ಶುದ್ಧ ತಪ್ಪು. ಪುಣೆ ಫ್ರಾಂಚೈಸಿ ತನ್ನ ಹಳ್ಳವನ್ನ ತಾನೇ ತೋಡಿಕೊಂಡಿದ್ದಾರೆ. ಕಳೆದ ಸಲ ಪುಣೆ 7ನೇ ಸ್ಥಾನ ಪಡೆಯಲು ಧೋನಿಯೇ ಕಾರಣ ಅಂದುಕೊಂಡ್ರೆ ಅವರಿಗಿಂತ ಮತ್ತೊಬ್ಬ ದಡ್ಡ ಬೇಱರು ಇಲ್ಲ. ತಂಡವೇ ಸರಿಯಿಲ್ಲದಿದ್ದಾಗ ನಾಯಕನಾದವನು ಏನು ಮಾಡಿಯಾನು. ಮಹಿಯನ್ನು ಕ್ಯಾಪ್ಟನ್ಸಿಯಿಂದ ಕಿತ್ತು ಹಾಕಿದ್ದಕ್ಕೆ ಪುಣೆ ಫ್ರಾಂಚೈಸಿ ವಿರುದ್ಧ ಕ್ರಿಕೆಟರ್ಸ್ ಟೀಕಾಸ್ತ್ರ ಬಿಟ್ಟಿದ್ದಾರೆ. ಅದರಲ್ಲೂ ಮೊಹಮ್ಮದ್​ ಅಜರುದ್ದೀನ್ ಕೆಂಡಮಂಡಲವಾಗಿದ್ದಾರೆ.

‘ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ಪರಿ ನಿಜಕ್ಕೂ ಅಪಮಾನಕಾರಿ ಹಾಗೂ ಥರ್ಡ್​ ರೇಟ್​​​ ರೀತಿಯಾಗಿತ್ತು. ಧೋನಿ ಭಾರತಿಯ ಕ್ರಿಕೆಟ್'​​ನ ಕಿರೀಟ. ಕಳೆದ 8-9 ವರ್ಷಗಳಿಂದ ತಮ್ಮ ನಾಯಕತ್ವದಲ್ಲಿ ಎಲ್ಲವನ್ನೂ ಗೆದ್ದಿದ್ದಾರೆ. ಪುಣೆ ಮಾಲೀಕರು ತನ್ನ ಸ್ವಂತ ದುಡ್ಡಿನಿಂದ ತಂಡವನ್ನು ನಡೆಸುತ್ತಿರಬಹುದು. ಆದರೆ ಧೋನಿಯನ್ನು ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುವಾಗ ಅವರ ಹತ್ತು ವರ್ಷದ ದಾಖಲೆಗಳು ನೆನಪಿಗೆ ಬರಲಿಲ್ಲವೇ. ನಿಜಕ್ಕೂ ಮಾಜಿ ಆಟಗಾರನಾಗಿ ನನಗೆ ಬೇಸರ ಮತ್ತು ಕೋಪ ಎರಡೂ ಬರುತ್ತಿದೆ’ ಎಂದು ಮೊಹಮ್ಮದ್ ಅಜರುದ್ದೀನ್ ಹೇಳಿಕೊಂಡಿದ್ದಾರೆ.

ಕ್ರಿಕೆಟ್​ ಆಸ್ಟ್ರೇಲಿಯಾದ ಕೈಗೊಂಬೆ ಸ್ಟೀವನ್ ಸ್ಮಿತ್..!: ಪುಣೆಗೆ ಸ್ಮಿತ್ ಗೆಲ್ಲಿಸಿಕೊಡ್ತಾರಾ ಐಪಿಎಲ್ ಟ್ರೋಫಿ..?

ಯಂಗ್ ಪ್ಲೇಯರ್​ಗೆ ಕ್ಯಾಪ್ಟನ್ಸಿ ನೀಡ್ಬೇಕು ಅಂತ ಸ್ಟೀವನ್ ಸ್ಮಿತ್ ಕೈಗೆ ಪುಣೆ ನಾಯಕತ್ವವನ್ನು ನೀಡಲಾಗಿದೆ. ಸ್ಮಿತ್ ಕ್ರಿಕೆಟ್ ಆಸ್ಟ್ರೇಲಿಯಾದ ಕೈಗೊಂಬೆ. ಐಪಿಎಲ್ ಆಡು ಎಂದರೆ ಆಡಬೇಕು. ಬೇಡ ಅಂದರೆ ಆಡುವ ಹಾಗಿಲ್ಲ. ಇನ್ನು ಐಪಿಎಲ್'​ನಲ್ಲಿ ಸ್ಟೀವನ್ ಸಾಧನೆ ಏನೂ ಇಲ್ಲ. ಇಷ್ಟೇ ಅಲ್ಲದೆ ಸದ್ಯ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಬಾರ್ಡರ್-ಗಾಸವ್ಕರ್​ ಸರಣಿ ಗೆಲ್ಲುವ ಒತ್ತಡದಲ್ಲಿದೆ. ಟೆಸ್ಟ್​ ಸರಣಿ ಸೋತರೆ ಸ್ಟೀವನ್ ಸ್ಮಿತ್ ಕ್ಯಾಪ್ಟನ್ಸಿ ಅಲುಗಾಡಲಿದೆ. ಇಂತಹ ಆಟಗಾರರನನ್ನು ನಂಬಿಕೊಂಡು ಧೋನಿಗೆ ಕೊಕ್ ಕೊಟ್ಟಿದ್ದಾರೆ ಆದರೆ ಪುಣೆ ಫ್ರಾಂಚೈಸಿಗಿಂತ ಬೇರೊಬ್ಬ ದಂಡ ಫ್ರಾಂಚೈಸಿ ಇಲ್ಲ ಅನಿಸುತ್ತದೆ.

ಧೋನಿ ಆರ್ಭಟ ಐಪಿಎಲ್​ನಲ್ಲೂ ಶುರು: ಮುಂದಿನ ವರ್ಷದ ಬಿಡ್ ಮೇಲೆ ಮಹಿ ಕಣ್ಣು

ಟೀಂ ಇಂಡಿಯಾ ಕ್ಯಾಪ್ಟನ್ಸಿ ಬಿಟ್ಮೇಲೆ ಧೋನಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಸೆಂಚುರಿ ಸಿಡಿಸಿದ್ದರು. ಟಿ20 ಕ್ರಿಕೆಟ್'​ನಲ್ಲಿ 76ನೇ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದರು. ನಾಯಕನಾಗಿ ಮಾಡದ ಸಾಧನೆಯನ್ನು ಆಟಗಾರನಾಗಿ ಮಾಡಿದ್ದರು. ಈಗ ಐಪಿಎಲ್​'ನಲ್ಲೂ ಒಬ್ಬ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದು, ಅಲ್ಲೂ ಆರ್ಭಟಿಸಲಿದ್ದಾರೆ. ಮಹಿ ಪಕ್ಕಾ ಪ್ಲಾನ್ ಮಾಡುತ್ತಾರೆ. ಈಗ ಅವರ ಕಣ್ಣು ಮುಂದಿನ ವರ್ಷ ನಡೆಯುವ ಐಪಿಎಲ್​ ಆಟಗಾರರ ಹರಾಜಿನ ಮೇಲಿದೆ. ಈ ವರ್ಷ ಅವರ ಅದ್ಭುತ ಪ್ರದರ್ಶನ ನೀಡಿದ್ರೆ, ಮುಂದಿನ ವರ್ಷ ಕೋಟಿಕೋಟಿಗೆ ಬಿಕರಿಯಾಗಲಿದ್ದಾರೆ. ಒಟ್ಟಿನಲ್ಲಿ ಪುಣೆ ಫ್ರಾಂಚೈಸಿ ತನ್ನ ದಡ್ಡತನದಿಂದ ನಾಯಕತ್ವದಿಂದ ಕಿತ್ತು ಹಾಕಿರುವುದು ಧೋನಿಗೆ ನಷ್ಟಕ್ಕಿಂತ ಲಾಭವೇ ಜಾಸ್ತಿ.

click me!