ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಲು ಪಾಕ್ ವೇಗಿ ಬಳಿ ಇದೆ ಟಿಪ್ಸ್!

Published : Oct 17, 2018, 07:12 PM IST
ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಲು ಪಾಕ್ ವೇಗಿ ಬಳಿ ಇದೆ ಟಿಪ್ಸ್!

ಸಾರಾಂಶ

ವಿರಾಟ್ ಕೊಹ್ಲಿಯನ್ನ ಔಟ್ ಮಾಡಬೇಕು ಅನ್ನೋದು ಎಲ್ಲಾ ಬೌಲರ್‌ಗಳ ಕನಸು. ಆದರೆ ಎಲ್ಲರಿಗೂ ಅದು ಸಾಧ್ಯವಾಗೋದಿಲ್ಲ. ಇದೀಗ ಪಾಕಿಸ್ತಾನ ವೇಗಿ ಕೊಹ್ಲಿ ವಿಕೆಟ್ ಕಬಳಿಸಲು ಟಿಪ್ಸ್ ನೀಡಿದ್ದಾರೆ.  

ದುಬೈ(ಅ.17): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದೇ ದೊಡ್ಡ ತಲೆನೋವು. ಪ್ರತಿ ಎಸೆತದಲ್ಲೂ ರನ್ ಕಲೆಹಾಕೋ ಸಾಮರ್ಥ್ಯ ಕೊಹ್ಲಿಗಿದೆ. ಆದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಹುಬೇಗನೆ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್‌ಗೆ ವಿಕೆಟ್ ಒಪ್ಪಿಸಿದ್ದರು.

ಕೊಹ್ಲಿ ಸೇರಿದಂತೆ ಶಿಖರ್ ಧವನ್, ರೋಹಿತ್ ಶರ್ಮಾ ಆರಂಭಿಕ 9  ಓವರ್‌ಗಳಲ್ಲೇ ಪೆವಿಲಿಯನ್ ಸೇರಿದ್ದರು. ಇಷ್ಟೇ ಅಲ್ಲ ಟೀಂ ಇಂಡಿಯಾ ಸೋಲು ಕಂಡಿತ್ತು.  ಪಾಕಿಸ್ತಾನ ಗೆಲುವಿಗೆ ಕಾರಣವಾಗಿದ್ದು ವೇಗಿ ಮೊಹಮ್ಮದ್ ಅಮೀರ್.  ಇದೀಗ ವಿರಾಟ್ ಕೊಹ್ಲಿ ವಿಕೆಟ್  ಕಬಳಿಸಲು ಅಮೀರ್ ಬಳಸಿದ ತಂತ್ರವನ್ನ ಬಹಿರಂಗ ಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಂತೆ ಇನ್‌ಸ್ವಿಂಗ್ ಎಸೆತವನ್ನ ಹಾಕಿದ್ದೆ. ಕೊಹ್ಲಿ ತಡಕಾಡಿದರು. ಆದರೆ ಮರು ಎಸೆತವನ್ನ ಅದೇ ರೀತಿ ಹಾಕಿದರೆ ಕೊಹ್ಲಿ ಖಂಡಿತವಾಗಲೂ ರನ್ ಕಲೆ ಹಾಕೋ ವಿಶ್ವಾಸವಿತ್ತು. ಹೀಗಾಗಿ  ಔಟ್‌ಸ್ವಿಂಗ್ ಡೆಲಿವರಿ ಮೂಲಕ ಕೊಹ್ಲಿ ವಿಕೆಟ್ ಕಬಳಿಸಿದ್ದೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?