
ನವದೆಹಲಿ(ಅ.06): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಆತ್ಮಚರಿತ್ರೆ ಬರೆಯಲಿದ್ದಾರಂತೆ.
ಮುಂದಿನ ವರ್ಷ ಈ ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ತಿಳಿಸಿದೆ. ಎರಡು ಬಾರಿ ಭಾರತ ವನಿತೆಯರ ತಂಡ ಏಕದಿನ ವಿಶ್ವಕಪ್'ನ ಫೈನಲ್ ಪ್ರವೇಶಿಸಿದ್ದು, ಎರಡೂ ಬಾರಿಯೂ ಮಿಥಾಲಿಯೇ ತಂಡದ ನೇತೃತ್ವ ವಹಿಸಿದ್ದರು.
ಲಂಡನ್'ನಲ್ಲಿ ನಡೆದ 2017 ಮಹಿಳಾ ವಿಶ್ವಕಪ್'ನಲ್ಲಿ ವನಿತೆಯರ ಟೀಂ ಇಂಡಿಯಾ ಫೈನಲ್'ನಲ್ಲಿ ಎಡವಿ ನಿರಾಸೆ ಅನುಭವಿಸಿತ್ತು. ಏಕದಿನ ಕ್ರಿಕೆಟ್'ನಲ್ಲಿ 51.58ರ ಸರಾಸರಿಯಲ್ಲಿ 6190 ರನ್ ಕಲೆಹಾಕಿರುವ ಮಿಥಾಲಿ, ಅತಿಹೆಚ್ಚು ರನ್ ಬಾರಿಸಿದ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನೂ ನಿರ್ಮಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.