
ಬೆಂಗಳೂರು(ಮಾ.30): ಬಲಗಾಲಿನ ಗಾಯಕ್ಕೆ ತುತ್ತಾಗಿರುವ ಆಸೀಸ್ ವೇಗಿ ಈ ಬಾರಿಯ ಐಪಿಎಲ್'ನಿಂದ ಹೊರಬಿದಿದ್ದಾರೆ. ಕೊಲ್ಕತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದ ಸ್ಟಾರ್ಕ್ ಗಾಯಕ್ಕೆ ತುತ್ತಾಗಿರುವುದು ಕೆಕೆಆರ್ ಪ್ರಾಂಚೈಸಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್'ಗೆ ಸ್ಟಾರ್ಕ್ ಬದಲಿಗೆ ಚಡ್ಡಾ ಸೈಯರ್ಸ್ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ತವರಿಗೆ ಬಂದ ಬಳಿಕ ಸ್ಟಾರ್ಕ್ ಗಾಯದ ಬಗ್ಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ವರದಿಯಾಗಿದೆ.
ಸ್ಟಾರ್ಕ್ ಐಪಿಎಲ್'ನಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಈ ಬಾರಿಯೂ ಸೇರಿದಂತೆ ಮೂರನೇ ಬಾರಿಗೆ ಸ್ಟಾರ್ಕ್ ಐಪಿಎಲ್'ನಿಂದ ಹೊರಬಿದ್ದಂತಾಗಿದೆ. 2016ರಲ್ಲಿ RCB ತಂಡದ ಸದಸ್ಯರಾಗಿದ್ದ ಸ್ಟಾರ್ಕ್ ಪಾದದ ಗಾಯಕ್ಕೆ ತುತ್ತಾಗಿ ಹೊರಗುಳಿದಿದ್ದರು, 2017ರಲ್ಲೂ ಐಪಿಎಲ್ ಟೂರ್ನಿಯಲ್ಲಿ ಮೈದಾನಕ್ಕಿಳಿದಿರಲಿಲ್ಲ.
ಸ್ಟಾರ್ಕ್ ಇದುವರೆಗೆ 27 IPL ಪಂದ್ಯಗಳನ್ನಾಡಿ 34 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.