ಉಳಿದೆರಡು ಟೆಸ್ಟ್'ಗೆ ಮಿಚೆಲ್ ಮಾರ್ಷ್ ಔಟ್..!

By Suvarna Web DeskFirst Published Mar 9, 2017, 10:25 AM IST
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವು ಮಾರ್ಚ್ 16ರಿಂದ ರಾಂಚಿಯಲ್ಲಿ ಆರಂಭವಾಗಲಿದೆ.   

ನವದೆಹಲಿ(ಮಾ.09): ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಭುಜದ ನೋವಿಗೆ ತುತ್ತಾಗಿದ್ದು ತವರಿಗೆ ಮರಳಿದ್ದಾರೆ. ಹಾಗಾಗಿ ಭಾರತ ವಿರುದ್ಧದ ಉಳಿದೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಮಾರ್ಷ್ ಎರಡು ಟೆಸ್ಟ್ ಪಂದ್ಯಗಳಿಂದ ಕೇವಲ 48 ರನ್ ಮಾತ್ರ ಗಳಿಸಿದ್ದರು. ಇನ್ನು ಕೇವಲ ಐದು ಓವರ್'ಗಳನ್ನಷ್ಟೇ ಬೌಲಿಂಗ್ ಮಾಡಿದ್ದರು. ಮಿಚೆಲ್ ಮಾರ್ಷ್ ಅನುಪಸ್ಥಿತಿಯಲ್ಲಿ ಆರನೇ ಕ್ರಮಾಂಕಕ್ಕೆ ಯಾರು ಸ್ಥಾನ ಪಡೆಯಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನಷ್ಟೇ ತೆರೆಕಾಣಬೇಕಾಗಿದೆ.

"ಭಾರತಕ್ಕೆ ಬರುವ ಮುನ್ನ ಮಾರ್ಷ್ ಆರೋಗ್ಯ ಉತ್ತಮವಾಗಿತ್ತು. ಆದರೆ ಭಾರತದ ವಾತಾವರಣ ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರಿತು" ಎಂದು ಕೋಚ್ ಡೇರನ್ ಲೆಹ್ಮಾನ್ ಹೇಳಿದ್ದಾರೆ.

ಮುಂದಿನ ಎರಡು ಟೆಸ್ಟ್ ಪಂದ್ಯಕ್ಕೆ ಆಯ್ಕೆ ಸಮಿತಿಯು ಓರ್ವ ಪರಿಣಿತ ಬ್ಯಾಟ್ಸ್'ಮನ್ ಇಲ್ಲವೇ ಸ್ಪಿನ್ ಬೌಲಿಂಗ್ ಮಾಡುವ ಆಲ್ರೌಂಡರ್'ಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ. ಇದರಿಂದ ಮೂರನೇ ಟೆಸ್ಟ್'ನಲ್ಲಿ ಉಸ್ಮಾನ್ ಖ್ವಾಜಾ ಅಥವಾ ಗ್ಲೇನ್ ಮ್ಯಾಕ್ಸ್'ವೆಲ್'ಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವು ಮಾರ್ಚ್ 16ರಿಂದ ರಾಂಚಿಯಲ್ಲಿ ಆರಂಭವಾಗಲಿದೆ.   

click me!