ಮಿಡಲ್ ಸ್ಟಂಪ್ ಬಿತ್ತು; ಬೇಲ್ಸ್ ಬೀಳಲಿಲ್ಲ; ಔಟಾ, ನಾಟೌಟಾ? ಆಸ್ಟ್ರೇಲಿಯಾದಲ್ಲಿ ಅಂಪೈರ್ಸ್ ತಬ್ಬಿಬ್ಬು

By Suvarna Web DeskFirst Published May 9, 2017, 1:59 PM IST
Highlights

ಇದು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ನಡೆದ ಲೋಕಲ್ ಟೂರ್ನಿಯ ಪಂದ್ಯವೊಂದರಲ್ಲಿ ಎದುರಾದ ಸನ್ನಿವೇಶ. ಭಾರತ ಮೂಲದ ಜತೀಂದರ್ ಸಿಂಗ್ ಅವರನ್ನು ಅಂಪೈರ್'ಗಳು ಔಟೆಂದು ಕಳುಹಿಸುವ ಮುನ್ನ ಸಾಕಷ್ಟು ಹೊತ್ತು ತಲೆ ಕೆರೆದುಕೊಳ್ಳಬೇಕಾಯಿತು. ಇಂಥದ್ದೊಂದು ಸನ್ನಿವೇಶ ಅಪರೂಪದಲ್ಲಿ ಅಪರೂಪವಾದ್ದರಿಂದ ಕ್ರಿಕೆಟ್'ನ ನಿಯಮಗಳು ಈ ಬಗ್ಗೆ ಏನು ಹೇಳುತ್ತವೆ ಎಂಬುದು ಬಹುತೇಕರಿಗೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ.

ಮೆಲ್ಬೋರ್ನ್: ಕ್ರಿಕೆಟ್ ಪಂದ್ಯದಲ್ಲಿ ಹೀಗೊಂದು ಪ್ರಸಂಗ... ಬೌಲರ್ ಎಸೆದ ಚೆಂಡು ಬ್ಯಾಟುಗಾರನನ್ನು ವಂಚಿಸಿ ಮಧ್ಯದ ಸ್ಟಂಪನ್ನು ಉರುಳಿಸುತ್ತದೆ. ಆದರೆ, 3 ಸ್ಟಂಪ್'ಗಳ ಮೇಲಿದ್ದ 2 ಬೇಲ್'ಗಳು ಮಾತ್ರ ಕೆಳಗೆ ಬೀಳದೇ ಹಾಗೇ ಬ್ಯಾಲೆನ್ಸ್ ಮಾಡುತ್ತಿರುತ್ತವೆ. ಇದು ಔಟಾ? ನಾಟೌಟಾ? ಗೊಂದಲವಾಗುತ್ತಿದೆಯಾ? ಬೌಲರ್ ಮತ್ತು ಫೀಲ್ಡರ್'ಗಳು ವಿಕೆಟ್ ಬಿತ್ತೆಂದು ಸಂಭ್ರಮಿಸುತ್ತಿರುವಂತೆ ಅಂಪೈರ್'ಗಳೂ ಕೆಲ ಹೊತ್ತು ಗೊಂದಲಕ್ಕೆ ಸಿಲುಕುತ್ತಾರೆ.

ಇದು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ನಡೆದ ಲೋಕಲ್ ಟೂರ್ನಿಯ ಪಂದ್ಯವೊಂದರಲ್ಲಿ ಎದುರಾದ ಸನ್ನಿವೇಶ. ಭಾರತ ಮೂಲದ ಜತೀಂದರ್ ಸಿಂಗ್ ಅವರನ್ನು ಅಂಪೈರ್'ಗಳು ಔಟೆಂದು ಕಳುಹಿಸುವ ಮುನ್ನ ಸಾಕಷ್ಟು ಹೊತ್ತು ತಲೆ ಕೆರೆದುಕೊಳ್ಳಬೇಕಾಯಿತು. ಇಂಥದ್ದೊಂದು ಸನ್ನಿವೇಶ ಅಪರೂಪದಲ್ಲಿ ಅಪರೂಪವಾದ್ದರಿಂದ ಕ್ರಿಕೆಟ್'ನ ನಿಯಮಗಳು ಈ ಬಗ್ಗೆ ಏನು ಹೇಳುತ್ತವೆ ಎಂಬುದು ಬಹುತೇಕರಿಗೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ.

ನಿಯಮಗಳು ಏನು ಹೇಳುತ್ತವೆ?
ಎಂಸಿಸಿಯ ಕ್ರಿಕೆಟ್ ನಿಯಮಗಳು ಹೀಗೆ ಇದೆ: "ಎರಡೂ ಬೇಲ್'ಗಳು ಸ್ಟಂಪ್'ಗಳ ಮೇಲೆಯೇ ಇದ್ದರೆ ಅದು ಔಟೆನಿಸುವುದಿಲ್ಲ... ಸ್ಪಂಪ್ ಮೇಲಿಂದ ಬೇಲ್ ಸಂಪೂರ್ಣವಾಗಿ ಹೊರಬಿದ್ದರೆ, ಅಥವಾ ನೆಲದಿಂದ ಸ್ಟಂಪ್ ಕಿತ್ತು ಬಿದ್ದರೆ ಬ್ಯಾಟ್ಸ್'ಮ್ಯಾನ್ ಔಟ್ ಆಗುತ್ತಾನೆ" ಎಂದು ನಿಯಮದಲ್ಲಿ ಬರೆಯಲಾಗಿದೆ.

click me!