
ಮುಂಬೈ(ಮೇ.09): ಇದೇ ತಿಂಗಳು ಬಿಡುಗಡೆಗೆ ಕಾಯುತ್ತಿರುವ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರದ ಸಚಿನ್...ಸಚಿನ್ ಹಾಡು ಈಗಷ್ಟೇ ಸ್ವತಃ ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದ್ದು, ಒಂದು ಗಂಟೆಯಲ್ಲೇ ಹಾಡು ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.
ಯ್ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರದ ಸಚ್ಚಿನ್... ಸಚ್ಚಿನ್ ಹಾಡು ಕೇವಲ ಒಂದು ಗಂಟೆಯಲ್ಲೇ 15 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಾಡು ಬಿಡುಗಡೆಯ ಬಳಿಕ ಮಾತನಾಡಿದ ಸಚಿನ್, 'ಇದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ' ಎಂದಿದ್ದಾರೆ.
ಇರ್ಷಾದ್ ಕಮೀಲ್ ಬರೆದಿರುವ ಈ ಗೀತೆಯನ್ನ ಬಾಲಿವುಡ್'ನ ಖ್ಯಾತ ಗಾಯಕ ಸುಖ್ವಿಂದರ್ ಸಿಂಗ್ ಹಾಡಿದ್ದು, ಎ.ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ಇದೇ ಮೇ 26ರಂದು ತೆರೆಗೆ ಅಪ್ಪಳಿಸಲಿದೆ.
ಕಳೆದ ತಿಂಗಳಷ್ಟೇ ಸಚಿನ್ ಸಿನೆಮಾದ ಟ್ರೈಲರ್ ಬಡಿಯಾಗಿತ್ತು. ಅದಕ್ಕೆ ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.