ಅರ್ಜೆಂಟೀನಾ ಸೋಲಿನ ಬಳಿಕ ಕೇರಳ ಅಭಿಮಾನಿ ನಾಪತ್ತೆ

First Published Jun 22, 2018, 9:28 PM IST
Highlights

ಅರ್ಜೆಂಟೀನಾ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿಗೆ ಭಾರತದಲ್ಲೂ ಕೋಟ್ಯಾಂತರ ಅಭಿಮಾನಿ ಬಳಗವಿದೆ. ಅದರಲ್ಲೂ ಕೇರಳದ ಅಭಿಮಾನಿ ಇದೇ ಮೆಸ್ಸಿಗಾಗಿ ನಾಪತ್ತೆಯಾಗಿದ್ದಾನೆ. ಏನಿದು ಪ್ರಕರಣ. ಇಲ್ಲಿದೆ ವಿವರ.

ಕೋಟ್ಟಾಯಂ(ಜೂ.22): ಕೇರಳಾ ಫುಟ್ಬಾಲ್ ಪ್ರೀಯರ ನಾಡು. ವಿಶ್ವದ ಯಾವುದೇ ಮೂಲೆಯಲ್ಲಿ ಫುಟ್ಬಾಲ್ ಪಂದ್ಯವಾದರೊ ಕೇರಳ ಅಭಿಮಾನಿಗಳು ಹಿಂಬಾಲಿಸುತ್ತಾರೆ. ಇನ್ನು ಫಿಫಾ ವಿಶ್ವಕಪ್ ಅಂದರೆ ಕೇಳ್ಬೇಕಾ? ಹೀಗೆ ಅರ್ಜೆಂಟೀನಾ ಹಾಗೂ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿ ಅಭಿಮಾನಿಯೊರ್ವ ಸೋಲಿನ ನೋವು ತಾಳಲಾರದೆ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ.

ಈ ಅಭಿಮಾನಿ ಹೆಸರು ದಿನು ಅಲೆಕ್ಸ್. ಕೇರಳದ ಕೋಟ್ಟಾಯಂ ಜಿಲ್ಲೆಯ ಅರುಮಾನೂರ್ ಗ್ರಾಮದ ಈತ, ಇತ್ತೀಚೆಗಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಪಂದ್ಯದ ಸೋಲಿನಿಂದ ಜರ್ಝರಿತನಾಗಿದ್ದ. ಸೋಲಿನ ಬಳಿಕ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಈ ಜಗತ್ತಿನಲ್ಲಿ ನನಗೆ ನೋಡಲು ಇನ್ನೇನು ಉಳಿದಿಲ್ಲ. ನಾನು ಸಾವಿನ ಬಾಗಿಲನ್ನ ತಟ್ಟುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ.

30 ವರ್ಷದ ದಿನು ಅಲೆಕ್ಸ್, ಲಿಯೋನಲ್ ಮೆಸ್ಸಿ ಅಭಿಮಾನಿಯಾಗಿದ್ದ. ಆದರೆ ಈ ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದು ಈ ಅಭಿಮಾನಿಯ ನೋವನ್ನ ಇಮ್ಮಡಿಗೊಳಿಸಿದೆ. ಹೀಗಾಗಿ ದಿನು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾಗಿರೋ ದಿನಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 

 

click me!