ಫಿಫಾ ವಿಶ್ವಕಪ್ 2018: ನೆಯ್ಮಾರ್ ಅಬ್ಬರಕ್ಕೆ ಕೋಸ್ಟರಿಕಾ ಧೂಳೀಪಟ

First Published Jun 22, 2018, 8:12 PM IST
Highlights

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ ಹಾಗೂ ಕೋಸ್ಟರಿಕಾ ನಡುವಿನ ರೋಚಕ ಪಂದ್ಯ ಅಭಿಮಾನಿಗಳ ಭರಪೂರ ಮನರಂಜನೆ ನೀಡಿದೆ. ಇನ್ನೇನು ಪಂದ್ಯ ಡ್ರಾ ಅನ್ನುವಷ್ಟರಲ್ಲೇ ರೋಚಕ ತಿರುವು ಪಡೆದುಕೊಂಡಿದೆ.  ಹೇಗಿತ್ತು ಈ ಪಂದ್ಯ? ಇಲ್ಲಿದೆ ಹೈಲೈಟ್ಸ್

ರಷ್ಯಾ(ಜೂ.22): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ನಿರಾಸೆ ಅನುಭವಿಸಿದ ಬ್ರೆಜಿಲ್ ಗೆಲುವಿನ ನಗೆ ಬೀರಿದೆ. ಕೋಸ್ಟರಿಕಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಬ್ರೆಜಿಲ್ 2-0 ಅಂತರದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿದೆ. ಬ್ರೆಜಿಲ್ ನೀಡಿದ ಶಾಕ್‌ಗೆ ಕೋಸ್ಟರಿಕಾ ವಿಶ್ವಕಪ್ ಟೂರ್ನಿಯಿಂದಲೇ ಬಹುತೇಕ ಹೊರಬಿದ್ದಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಆದರೆ ಗೋಲು ದಾಖಲಾಗಲಿಲ್ಲ. ಬ್ರೆಜಿಲ್ ಹೆಚ್ಚು ಆಕ್ರಮಣಕಾರಿ ಆಟವಾಡಿದರೆ, ಕೋಸ್ಟರಿಕಾ ಡಿಫೆನ್ಸ್ ಮೂಲಕ ಗೋಲು ತಡೆದು ಸಮಾಧಾನ ಪಟ್ಟಿತು. ಹೀಗಾಗಿ ಮೊದಲಾರ್ಧ ಗೋಲಿಲ್ಲದೆ ಅಂತ್ಯವಾಯಿತು.

ದ್ವಿತಿಯಾರ್ಧದಲ್ಲಿ ಗೋಲಿನ ಖಾತೆ ತೆರೆಯಲು ಉಭಯ ತಂಡಗಳು ಕಠಿಣ ಹೋರಾಟವನ್ನೇ ನಡೆಸಿತು. ಆದರೆ ಪ್ರಯೋಜನವಾಗಲಿಲ್ಲ. 90 ನಿಮಿಷದ ಅವಧಿಯಲ್ಲಿ ಅಭಿಮಾನಿಗಳು ಗೋಲು ಕಾಣಲೇ ಇಲ್ಲ. ಆದರೆ ಇಂಜುರಿ ಟೈಮ್‌ನಲ್ಲಿ ಬ್ರೆಜಿಲ್‌ನ ಫಿಲಿಪ್ ಕೌಂಟಿನ್ಹೋ ಗೋಲು ಬಾರಿಸಿ ಭರ್ಜರಿ ಮುನ್ನಡೆ ತಂದುಕೊಟ್ಟರು. 

ಅಂತಿಮ ನಿಮಿಷದಲ್ಲಿ ಬ್ರೆಜಿಲ್ ಸ್ಟಾರ್ ಪ್ಲೇಯರ್ ನೆಯ್ಮಾರ್ 90+7ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಈ ಮೂಲಕ ಬ್ರೆಜಿಲ್ 2-0 ಅಂತರದಲ್ಲಿ ಗೆಲುವು ಸಾಧಿಸಿ, ಫಿಫಾ ವಿಶ್ವಕಪ್ ಆಸೆಯನ್ನ ಮತ್ತಷ್ಟು ಗಟ್ಟಿಗೊಳಿಸಿದೆ.
 

click me!