ಕೊಲೆಗಿಂತಲೂ ಮ್ಯಾಚ್‌ ಫಿಕ್ಸಿಂಗ್ ದೊಡ್ಡ ಅಪರಾಧ: MS ಧೋನಿ

By Web DeskFirst Published Mar 12, 2019, 12:11 PM IST
Highlights

ಮ್ಯಾಚ್ ಫಿಕ್ಸಿಂಗ್ ಎನ್ನುವುದು ಕೊಲೆ ಮಾಡುವುದಕ್ಕಿಂತಲೂ ದೊಡ್ಡ ಅಪರಾಧವಾಗಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಹೇಳಿದ್ದಾರೆ. ಅಷ್ಟಕ್ಕೂ ಧೋನಿ ಹೀಗೆ ಹೇಳಿದ್ದೇಕೆ ಎನ್ನುವುದಕ್ಕೆ ಇಲ್ಲಿದೆ ಉತ್ತರ...

ನವದೆಹಲಿ(ಮಾ.12): ನನ್ನ ಪ್ರಕಾರ ಕೊಲೆಗಿಂತಲೂ ಮ್ಯಾಚ್‌ ಫಿಕ್ಸಿಂಗ್ ದೊಡ್ಡ ಅಪರಾಧ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ.

ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

2013ರಲ್ಲಿ ನಡೆದ IPL ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿ 2 ವರ್ಷಗಳ ಕಾಲ ಅಮಾನತಿಗೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ. ಇದರ ಟ್ರೇಲರ್‌ನಲ್ಲಿ ಧೋನಿ ಹೇಳಿಕೆಗಳು ಬಿತ್ತರಗೊಂಡಿದ್ದು, ವೈರಲ್ ಆಗಿದೆ. ‘ತಂಡ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿತ್ತು. ನಾನು ಆರೋಪಕ್ಕೆ ಗುರಿಯಾಗಿದ್ದೆ. ನಮ್ಮ ಪಾಲಿಗೆ ಕಠಿಣ ಪರಿಸ್ಥಿತಿಯಾಗಿತ್ತು. ಮತ್ತೆ ವಾಪಾಸ್ ಆಗಿದ್ದು, ಭಾವುಕ ಕ್ಷಣವಾಗಿತ್ತು’ ಎಂದಿದ್ದಾರೆ. 

ಐಪಿಎಲ್ 2019: ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಹೀಗಿದೆ!

2013ರ ಆವೃತ್ತಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಪ್ರಮುಖರಾದ ರಾಜ್ ಕುಂದ್ರಾ, ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ಚಟುವಟಿಕೆ ನಡಿಸಿದ ಅಪರಾಧಕ್ಕಾಗಿ ಜುಲೈ 2015ರಂದು ಈ ಎರಡು ತಂಡಗಳನ್ನು 2 ವರ್ಷದ ಮಟ್ಟಿಗೆ ಬ್ಯಾನ್ ಮಾಡಲಾಗಿತ್ತು. 

2 ವರ್ಷಗಳ ನಿಷೇಧದ ಬಳಿಕ IPL ಟೂರ್ನಿಗೆ ಕಮ್’ಬ್ಯಾಕ್ ಮಾಡಿದ ಚೆನ್ನೈ ಸೂಪರ್’ಕಿಂಗ್ಸ್ ತಂಡ 2018ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 12ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇದೇ ಮಾರ್ಚ್ 23ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. 
 

click me!